Saturday, December 5, 2015

Good Morning, Happy Sunday 6th December 2015

Good Morning & Have a Happy Sunday
6th December 2015 @ Hiremath, Tumkur

ಸ್ವಾಮಿ ರಾಮತೀರ್ಥರು 
(1873 - 1906)

ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ ಸ್ವಾಮಿ ವಿವೇಕಾನಂದರಷ್ಟೇ ಸಶಕ್ತ
ಮತ್ತು ಸಮರ್ಥ ಕ್ರಾಂತಿಯನ್ನು ಮಾಡಿದವರು ಸ್ವಾಮಿ ರಾಮತೀರ್ಥರು.
ಸ್ವಾಮಿ ರಾಮತೀರ್ಥರು ಬದುಕಿದ್ದುದು ಕೇವಲ ೩೩ ವರುಷ.
ಇವರು ಪಂಜಾಬ್‌ನ ಗುಜರನ್‌ವಾಲಾ ಜಿಲ್ಲೆಯ
ಮುರಾರಿವಾಲಾ ಎಂಬ ಚಿಕ್ಕ ಹಳ್ಳಿಯಲ್ಲಿ ೧೮೭೩ರಲ್ಲಿ ಜನಿಸುತ್ತಾರೆ.
ಇವರು ತುಂಬ ಚಿಕ್ಕವರಿರುವಾಗಲೇ ಇವರ ತಾಯಿ ತೀರಿಹೋಗುತ್ತಾರೆ.
ಅಣ್ಣ ಗುರುದಾಸ ಇವರನ್ನು ಬೆಳೆಸುತ್ತಾರೆ.
ರಾಮತೀರ್ಥರು ಅಪ್ರತಿಮ ಮೇಧಾವಿ. ಗಣಿತದಲ್ಲಂತೂ ಅವರು ಮೇರುಪರ್ವತ!!
ರಾಮತೀರ್ಥರ ಎದೆಯ ತುಂಬೆಲ್ಲ ‘ದೇಶಭಕ್ತಿ’ ತುಂಬಿ ಹರಿಯುತ್ತಿತ್ತು.
ಅವರು ತಮ್ಮನ್ನೇ ತಾವು ‘ಭಾರತ’ ಎಂದು ಭಾವಿಸಿಕೊಂಡಿದ್ದರು.
ನಮ್ಮ ಅಕ್ಕಮಹಾದೇವಿ, “ಆನು ಭಾವಿಸಲು ಗಂಡುರೂಪು ನೋಡಾ” ಎಂದು ಹೇಳಿದ ಹಾಗೆ
ಸ್ವಾಮಿ ರಾಮತೀರ್ಥರು ತಮ್ಮನ್ನು ತಾವು ‘ಭಾರತ’ ಮತ್ತು ‘ಭಾರತರೂಪ’ ಎಂದು ತಿಳಿದಿದ್ದರು
ಮತ್ತು ಹಾಗೆಂದು ಧೈರ್ಯದಿಂದ ಹೇಳುತ್ತಿದ್ದರು.’
 “ರಾಮನಲ್ಲಿಯೇ, ರಾಮತೀರ್ಥನಲ್ಲಿಯೇ ಭಾರತವಿದೆ. ಭಾರತವೇ ರಾಮ, ರಾಮತೀರ್ಥ”
ಎಂಬುವುದು ಅವರ ಧ್ಯೇಯವಾಕ್ಯವಾಗಿತ್ತು.
ರಾಮತೀರ್ಥರು ಸನ್ಯಾಸವನ್ನು ಸ್ವೀಕರಿಸುವ ಮೊದಲು ತೀರ್ಥರಾಮರಾಗಿದ್ದರು. ಸನ್ಯಾಸವನ್ನು ಸ್ವೀಕರಿಸಿದ ನಂತರ ಅವರು ರಾಮತೀರ್ಥರಾದರು. ಅವರ ದಿವ್ಯಜ್ಞಾನಕ್ಕೆ ತಲೆಬಾಗಿದ ಭಾರತ ರಾಮತೀರ್ಥರನ್ನು ತೀರ್ಥರೂಪರನ್ನಾಗಿ ಸ್ವೀಕರಿಸಿತು.
ಸ್ವಾಮಿ ರಾಮತೀರ್ಥರ ಬದುಕು ಮತ್ತು ಅವರ ಬದುಕಿನ ಬಗೆಯ ಮೇಲೆ
ಬೆಳಕನ್ನು ಚೆಲ್ಲುವ ಘಟನೆಯೊಂದಿಲ್ಲಿದೆ, ಗಮನಿಸಿ.
ತೀರ್ಥರಾಮರು ಬಿ. ಎ. ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿತ್ತು. ಅದಕ್ಕಾಗಿ ಅವರು ಕಾಲೇಜಿಗೆ ಪರೀಕ್ಷಾಶುಲ್ಕವನ್ನು ಕಟ್ಟಬೇಕಿತ್ತು. ಪರೀಕ್ಷಾಶುಲ್ಕವನ್ನು ಭರಿಸುವ ಸಾಮರ್ಥ್ಯ ಅವರಲ್ಲಿರಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ಗಂಭೀರವಾಗಿತ್ತು. ಏನು ಮಾಡುವುದು? ಯಾರನ್ನು ಕೇಳುವುದು? ತೀರ್ಥರಾಮರು “ಶತಾಯ ಗತಾಯ” ಪ್ರಯತ್ನ ಮಾಡಿದರು. ಹಾಗೂ ಹೀಗೂ ಮಾಡಿ, ಹರಸಾಹಸಪಟ್ಟು ಪರೀಕ್ಷೆಗೆ ಕಟ್ಟಬೇಕಾದ ಒಂದಷ್ಟು ಪರೀಕ್ಷಾಶುಲ್ಕವನ್ನು ಅವರು ಕಲೆಹಾಕಿದರು. ಅವರದೆಷ್ಟೇ ಪ್ರಯತ್ನಮಾಡಿದರೂ ನಿಗದಿತ ಪರೀಕ್ಷಾಶುಲ್ಕವನ್ನು ಕಟ್ಟಲು ಇನ್ನೂ ಐದು ರೂಪಾಯಿ ಕಮ್ಮಿ ಬಂತು. ಏನೆಲ್ಲ ಪ್ರಯತ್ನಮಾಡಿದರೂ ಐದು ರೂ. ಗಳನ್ನು ಹೊಂದಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಅವರಿಗೆ ತುಂಬ ನಿರಾಶೆಯಾಯಿತು, ಮನಸ್ಸು ಜರ್ಜರಿತವಾಯಿತು, ದುಃಖ ಉಮ್ಮಳಿಸಿ ಬಂತು. ತೀರ್ಥರಾಮರು ಮನಸಾರೆ ಅತ್ತುಬಿಟ್ಟರು. ಅವರು ವ್ಯಾಕುಲರಾದರು,  ಚಿಂತಾಗ್ರಸ್ಥರಾದರು. ಅವರ ಮುಖ ಸಪ್ಪೆ ಆಯಿತು. ಆದರೇನು ಮಾಡುವುದು?
ಮೂರ‍್ನಾಲ್ಕು ದಿನಗಳಿಂದ ತೀರ್ಥರಾಮರ ಭಾರವಾದ ಹೆಜ್ಜೆ ಹಾಗೂ ಚಿಂತಾಕ್ರಾಂತ ಮುಖವನ್ನು ಗಮನಿಸುತ್ತಿದ್ದ ಚಂದೂ ಚಾಚಾನಿಗೆ ತೀರ್ಥರಾಮರು ಅದೇಕೆ ಅಷ್ಟೊಂದು ವ್ಯಾಕುಲರಾಗಿದ್ದಾರೆ ಎಂಬುವುದು ಅರ್ಥವಾಗಲಿಲ್ಲ. ಚಂದೂ ಚಾಚಾ ತೀರ್ಥರಾಮರು ಓದುತ್ತಿದ್ದ ಕಾಲೇಜ್‌ನ ಎದುರುಗಡೆ ಚಿಕ್ಕ ಮಿಠಾಯಿ ಅಂಗಡಿಯೊಂದನ್ನಿಟ್ಟುಕೊಂಡು ಮಿಠಾಯಿ ಮಾರುತ್ತಿದ್ದ. ಅವನನ್ನು ಎಲ್ಲರೂ “ಚಾಚಾ ಚಂದು ಹಲವಾಯೀ” ಎಂದು ಕರೆಯುತ್ತಿದ್ದರು.
ಸದಾ ಗೆಲುವಿನಿಂದ ತುಂಬಿಕೊಂಡಿರುತ್ತಿದ್ದ ತೀರ್ಥರಾಮರ ಕಳೆಗುಂದಿದ ಮುಖವನ್ನು ನೋಡುವುದು ಚಂದಾ ಚಾಚಾನಿಗೆ ಆಗಲಿಲ್ಲ. ಆತ, “ರಾಮು ಬೇಟಾ,
ಅದೇನು ಚಿಂತೆ ಮಾಡುತ್ತಿರುವೆಯಪ್ಪಾ? ಅದೇಕೆ ಸಪ್ಪೆಯಾಗಿರುವೆ? ಏನು ಕಾರಣ ಹೇಳು ಮಗಾ?” ಎಂದು ಪ್ರೀತಿಯಿಂದ ಕೇಳಿದ. ಮೊದಲು, ಮೊದಲು “ಏನಿಲ್ಲ, ಏನಿಲ್ಲ” ಎಂದು ಜಾರಿಕೆಯ ಉತ್ತರ ಕೊಟ್ಟರೂ ಸಹ ಕೊನೆಗೆ ಚಂದೂ ಚಾಚಾನ ಆತ್ಮೀಯ ಒತ್ತಡಕ್ಕೆ ಮಣಿದ ತೀರ್ಥರಾಮರು ಚಂದೂ ಚಾಚಾನ ಎದುರಿನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದರು.
“ಓಹೋ, ಇಷ್ಟೇನಾ?” ಎಂದು ತಕ್ಷಣವೇ ಚಂದೂ ಚಾಚಾ ತನ್ನ ಗಲ್ಲಾಪೆಟ್ಟಿಗೆಯಿಂದ ಐದು ರೂ.- ಗಳನ್ನು ತೆಗೆದು ತೀರ್ಥರಾಮರಿಗೆ ಪರೀಕ್ಷಾಶುಲ್ಕವನ್ನು ಕಟ್ಟುವುದಕ್ಕೆಂದು ಕೊಟ್ಟು ತೀರ್ಥರಾಮರ ಬೆನ್ನುತಟ್ಟಿದ. ತೀರ್ಥರಾಮರು ಪರೀಕ್ಷಾಶುಲ್ಕವನ್ನು ಕಟ್ಟಿದರು. ಅವರು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಉತ್ತಮ ದರ್ಜೆಯಲ್ಲಿ ಪರೀಕ್ಷೆಯನ್ನು ಪಾಸುಮಾಡಿದರು. ಪರೀಕ್ಷೆಯನ್ನು ಪಾಸುಮಾಡುತ್ತಲೇ ಅವರಿಗೆ ಸರಕಾರಿ ಕಾಲೇಜೊಂದರಲ್ಲಿ ಗಣಿತ ಅಧ್ಯಾಪಕ ಹುದ್ದೆ ಕೂಡ ದೊರೆಯಿತು. ತುಂಬ ಚಿಕ್ಕ ವಯಸ್ಸಿನಲ್ಲಿಯೇ ತೀರ್ಥರಾಮರು ಅಧ್ಯಾಪಕ- ಪ್ರಾಧ್ಯಾಪಕರಾದರು.
ತೀರ್ಥರಾಮರಿಗೆ ಸರಕಾರಿ ನೌಕರಿ ದೊರೆತಾದ ಮೇಲೆ ಅವರು ಪ್ರತಿ ತಿಂಗಳು
ಚಾಚಾ ಚಂದೂ ಹಲವಾಯಿಗೆ ಐದು ರೂ. ಗಳ ಮನಿಆರ್ಡರ್‌ನ್ನು ಕಳುಹಿಸಿಕೊಡತೊಡಗಿದರು.
ಅದೊಂದು ಸಲ ಚಂದೂ ಹಲವಾಯಿಯ ಅಂಗಡಿಯ ಮುಂದೆ ತೀರ್ಥರಾಮರು ನಡೆದುಕೊಂಡು ಹೋಗುತ್ತಿದ್ದರು. ತೀರ್ಥರಾಮರನ್ನು ಗಮನಿಸಿದ ಚಂದೂ ಹಲವಾಯಿ ತೀರ್ಥರಾಮರನ್ನು ತನ್ನ ಅಂಗಡಿಯಲ್ಲಿ ಬರಮಾಡಿಕೊಂಡು ಕೇಳುತ್ತಾನೆ, “ಅಯ್ಯಾ.
ನೀವು ಪ್ರತಿ ತಿಂಗಳು ನನಗೆ ೫. ರೂ.ಗಳ ಮನಿಆರ್ಡರ್‌ನ್ನು ಕಳುಹಿಸಿಕೊಡುತ್ತಿದ್ದೀರಿ.
ನನ್ನ ಅಂಗಡಿಯಿಂದ ನೀವೇನನ್ನೂ ಖರೀದಿಸಿಯೂ ಇಲ್ಲ ಮತ್ತು ಖರೀದಿಸುತ್ತಲೂ ಇಲ್ಲ. ಈಗಾಗಲೇ ನೀವು ನನಗೆ ೩೫ ರೂ.ಗಳನ್ನು ಕಳುಹಿಸಿಯಾಗಿದೆ.
ನನಗೇಕೆ ಪ್ರತಿ ತಿಂಗಳು ನೀವು ವೃಥಾ ಐದು ರೂ.ಗಳನ್ನು ಕಳುಹಿಸಿಕೊಡುವುದು?” ಎಂದು.
ಅದಕ್ಕೆ ಉತ್ತರವಾಗಿ ತೀರ್ಥರಾಮರು, “ಚಂದೂ ಚಾಚಾ, ನೀನು ಅವತ್ತು ನನಗೆ, ನನ್ನ ಆ ಸಂಕಷ್ಟದ ದುಸ್ತರ ಸಮಯದಲ್ಲಿ ಪರೀಕ್ಷಾಶುಲ್ಕವನ್ನು ಕಟ್ಟುವುದಕ್ಕೆ ಐದು ರೂ.ಗಳನ್ನು ಕೊಡದೆ ಹೋಗಿದ್ದರೆ ನನಗೆ ಪರೀಕ್ಷಾಶುಲ್ಕ ಕಟ್ಟಲಾಗುತ್ತಿರಲಿಲ್ಲ.
ಅದು ಕಾರಣವಾಗಿ ನಾನು ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನೇನಾದರೂ ಇವತ್ತು ಪ್ರಾಧ್ಯಾಪಕನಾಗಿದ್ದೇನೆ ಎಂದರೆ ಅದು ಅವತ್ತು ನೀನು ಯಾವೊಂದೂ ಫಲಾಪೇಕ್ಷೆ ಇಲ್ಲದೆ ನನಗೆ ನೀಡಿದ ಐದು ರೂ.ಗಳ ಕಾರಣದಿಂದಾಗಿ!! ಚಾಚಾ, ನೀನು ಅಂದು ನನಗೆ ದುಡ್ಡು ಕೊಡದೆ ಹೋಗಿದ್ದರೆ ನಾನು ಪರೀಕ್ಷೆಗೆ ಕುಳಿತುಕೊಳ್ಳುವುದಕ್ಕೆ ಆಗುತ್ತಲೇ ಇರಲಿಲ್ಲ. ನನ್ನ ಆರ್ಥಿಕ ಅಕಾಲದಲ್ಲಿ
ಸಹಾಯಮಾಡಿದ ನಿನಗೆ ನಾನು ಅದೆಷ್ಟು ಕೃತಜ್ಞತೆ ಹೇಳಿದರೂ ಸಾಲದು.
ಇವತ್ತು ನಾನು ಅಧ್ಯಾಪಕ ಹುದ್ದೆಯಲ್ಲಿರುವುದಕ್ಕೆ ನೀನು ಕಾರಣ.
ನಾನಿವತ್ತು ಪಡೆಯುತ್ತಿರುವ ಸಂಬಳ ಅವತ್ತು ನೀನು ಮಾಡಿದ ಸಹಾಯದ ಪ್ರತಿಫಲ. ನೀನು ಅವತ್ತು ಮಾಡಿದ ಉಪಕಾರವನ್ನು ನಾನೆಂದೂ ಮರೆಯಲಾರೆ.
ನಾನು ನಿನಗೆ ಯಾವತ್ತೂ ಆಭಾರಿ. ಅವತ್ತು ನೀನು ಮಾಡಿದ ಸಹಾಯವನ್ನು ನೆನೆದುಕೊಂಡು ಕೃತಜ್ಞತಾರೂಪದಲ್ಲಿ ನಾನು ನಿನಗೆ ಹಣವನ್ನು ಕಳುಹಿಸಿಕೊಡುತ್ತಿರುವೆ. ಚಾಚಾ, ನೀನು ‘ಒಲ್ಲೆ’ ಎನ್ನಬಾರದು, ‘ಬೇಡ’ ಎನ್ನಬಾರದು” ಎಂದು ಹೇಳಿ
ಅವರು ಚಾಚಾನ ಅಂಗಡಿಯಿಂದ ನಿರ್ಗಮಿಸುತ್ತಾರೆ.
ತೀರ್ಥರಾಮರ ಕೃತಜ್ಞತಾಭಾವ ಹಾಗೂ ಅವರ ಹದುಳ ವರ್ತನೆಯನ್ನು ಕಂಡು ಚಂದೂ ಚಾಚಾನ ಕಣ್ಣುಗಳಲ್ಲಿ ಆನಂದಾಶ್ರುಗಳು ತುಂಬಿಕೊಳ್ಳುತ್ತವೆ. ಅವು ಕೋಡಿವೊಡೆದು ಕಣ್ಣಂಚಿನಿಂದ ಹರಿದು ಹೊರಬಂದು ಧರೆಯ ಮೇಲುರುಳುತ್ತವೆ.
ಆತ ವಿಸ್ಮಯದಿಂದ ತೀರ್ಥರಾಮರು ಹೋದ ದಿಕ್ಕನ್ನು ನೋಡುತ್ತ ನಿಲ್ಲುತ್ತಾನೆ.
ಯಾರೇ ನಮಗೆ ಸಹಾಯ ಮಾಡಿರಲಿ, ಅದಕ್ಕೆ ನಾವು ಕೃತಜ್ಞರಾಗಿರಬೇಕು. ಸಹಾಯವದು ಚಿಕ್ಕದೋ, ದೊಡ್ಡದೋ, ಆ ಮಾತು ಬೇರೆ. ಅದು ಮಹತ್ತ್ವದಲ್ಲ.
ಸಹಾಯಮಾಡಿದವರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರು ಇನ್ನೊಬ್ಬರಿಗೆ ಸಹಾಯಮಾಡುತ್ತಾರೋ ಅವರಿಗೆ ಆ ದೇವರು ಕೂಡ ಸಹಾಯಮಾಡುತ್ತಾನೆ. ಇದರಲ್ಲಿ ಎರಡು ಮಾತಿಲ್ಲ.
ಸ್ವಾಮಿ ರಾಮತೀರ್ಥರು, ಯಾವ ರೀತಿ ಆದರ್ಶ ಮತ್ತು ಮೌಲ್ಯಗಳ ಆರಾಧನೆ, ಉಪಾಸನೆಯನ್ನು ಮಾಡಿಕೊಂಡಿದ್ದರೋ ಅದೇ ರೀತಿ ಅವರು ತಮ್ಮ ಮಾತೃಭೂಮಿ ನಮ್ಮೀ ಭಾರತ ದೇಶವನ್ನು ಕೂಡ ಅಷ್ಟೇ ಗಾಢವಾಗಿ ಪ್ರೀತಿಸಿಕೊಂಡಿದ್ದರು.

ಭಾರತದ ಮೇಲಿನ ಅವರ ಅಪ್ಪಟ ಪ್ರೀತಿಯನ್ನು ಪ್ರತಿನಿಧಿಸುವ ಪದಗಳಲ್ಲಿವೆ,
ನೋಡಿ

“ಹಮ್ ರೂಖೇ ಟುಕಡೇ ಖಾಯೆಂಗೇ, ಭಾರತ್ ಪರ್ ವಾರೇ ಜಾಯೆಂಗೇ |
ಹಮ್ ಸೂಖೇ ಚನಾ ಚಬಾಯೆಂಗೇ, ಭಾರತ್ ಕೀ ಬಾತ್ ಬನಾಯೆಂಗೇ ||
ಹಮ್ ನಂಗೇ ಉಮರ್, ಬಿತಾಯೆಂಗೇ, ಭಾರತ್ ಪರ್ ಜಾನ್ ಮಿಟಾಯೆಂಗೇ |
ಹಮ್ ಸೂಲೋಂ ಪರ್ ದೌಡೇ ಜಾಯೆಂಗೇ, ಕಾಂಟೋ ಕೋ ರಾಖ್ ಬನಾಯೆಂಗೇ ||
ಹಮ್ ದರ್ ದರ್ ಧಕ್ಕೇ ಖಾಯೆಂಗೇ, ಆನಂದ್ ಕೀ ಝಲಕ್ ದಿಖಾಯೆಂಗೇ |
ಹಮ್ ಸಬ್ ರಿಸ್ತೇ-ನಾತೇ ತೋಡೆಂಗೇ, ದಿಲ್ ಇಕ್ ಆತಮ್-ಸಂಗ್ ಜೋಡೆಂಗೇ ||”

ಅವರು ಭಾರತದ ಕುರಿತು ಹೇಳುತ್ತಿದ್ದ ಮಾತುಗಳನ್ನು ಗಮನಿಸಿ.

“ಆಯ್ ಐಮ್ ಇಂಡಿಯಾ. ಮಾಯ್ ಬಾಡಿ ಈಜ್ ಇಟ್ಸ್ ಲ್ಯಾಂಡ್.
ದ್ ಹಿಮಾಲಯಾಜ್ ಆರ್ ಮಾಯ್ ಹೆಡ್.
ಕನ್ಯಾಕುಮಾರಿ ಈಝ್ ಮಾಯ್ ಪೀಟ್.
ರಾಜಸ್ಥಾನ್ ಅಂಡ್ ಗುಜರಾತ್ ಆರ್ ಮಾಯ್ ಹಾರ್ಟ್.
ಗಂಗಾ ಅಂಡ್ ಬ್ರಹ್ಮಪುತ್ರಾ ಫ್ಲೋ ಅರೌಂಡ್ ಮಾಯ್ ಹೆಡ್”
("I am India. My body is its land. The Himalayas are my head.
Kanyakumari is my feet. Rajasthan and Gujarat are my heart.

Ganga and Brahmaputra flow around my head!!'')


ಮತ್ತೆ ಮುಂದುವರಿದು ಸ್ವಾಮಿ ರಾಮತೀರ್ಥರು ಹೇಳುತ್ತಾರೆ,

“ಮೈ ಸದೇಹ ಭಾರತ ಹೂಂ|
ಸಾರಾ ಭಾರತವರ್ಷ ಮೇರಾ ಶರೀರ ಹೈ|
ಕೊಮೋರಿನ್ (ಕನ್ಯಾಕುಮಾರಿ) ಮೇರೇ ಪೈರ್
ಔರ್ ಹಿಮಾಲಯ ಮೇರಾ ಸಿರ್ ಹೈ|

ಮೇರೀ ಜಟಾವೋಂ ಸೇ ಗಂಗಾ ಬಹತೀ ಹೈ
ಔರ್ ಮೇರೇ ಸಿರ್ ಸೇ ಬ್ರಹ್ಮಪುತ್ರ ಔರ್ ಸಿಂಧ್ ನಿಕಲೀ ಹೈ|

ವಿಂಧ್ಯಾಚಲ ಮೇರೀ ಕಮರ್ ಕೀ ಲಂಗೋಟೀ ಹೈ|
ಕೋರೋಮಂಡಲ್ ಮೇರೀ ಬಾಯೀಂ ಔರ್ ಮಾಲಾವಾರ್
ಮೇರೀ ದಾಹಿನೀ ಟಾಂಗ್ ಹೈಂ|

ಮೈ ಸಮೂಚಾ ಭಾರತವರ್ಷ ಹೂಂ|
ಉಸ್ ಕಾ ಪೂರ್ವ ಔರ್ ಪಶ್ಚಿಮ ಮೇರೀ ಬಾಹೇಂ ಹೈಂ,
ಜಿನ್ಹೇಂ ಮೈನೇ ಮಾನವ-ಸಮಾಜ್ ಕಾ ಆಲಿಂಗನ್
ಕರನೇ ಕೇ ನಿಮಿತ್ತ ಫೈಲಾ ರಖಾ ಹೈ|

ಮೇರಾ ಪ್ರೇಮ್ ಸಾರ್ವಭೌಮ್ ಹೈ
ಔರ್ ಮೇರೇ ಶರೀರ್ ಕೀ ಆಕೃತಿ ಕೈಸೀ ಹೈ?
ಮೈ ಖಡೇ ಹೋಕರ್ ಅನಂತ ಆಕಾಶ್ ಕೀ ವೋರ್ ದೃಷ್ಟಿಪಾತ್ ಕರತಾ ಹೂಂ|
ಮೇರೀ ಅಂತರಾತ್ಮಾ ವಿಶ್ವಾತ್ಮಾ ಹೈ|

ಜಬ್ ಮೈ ಚಲತಾ ಹೂಂ ತೋ
ಮೈ ಸೋಚತಾ ಹೂಂ ಕೀ ಭಾರತ್ ಚಲ್ ರಹಾ ಹೈ|

ಜಬ್ ಬೋಲತಾ ಹೂಂ ತಬ್ ಸೋಚತಾ ಹೂಂ ಕೀ ಭಾರತ್ ಬೋಲ್ ರಹಾ ಹೈ|
ಜಬ್ ಮೈ ಶ್ವಾಸ್ ಲೇತಾ ಹೂಂ, ತಬ್ ಭಾರತ್ ಹೀ ಶ್ವಾಸ್ ಲೇತಾ ಹುವಾ
ಪ್ರತೀತ ಹೋತಾ ಹೈ|

ಮೈ ಭಾರತವರ್ಷ್ ಹೂಂ, ಮೈ ಶಂಕರ್ ಹೂಂ,
ಮೈ ಶಿವ್ ಹೂಂ|” ಎಂದು.

Dr. Shri Shivananda Shivacharyaru
Hiremath, Tumkur

No comments:

Post a Comment