Good Evening, 9th December 2015, @ Hiremath, Tumkur
ತುಮಕೂರು ೦೬ : “ಡಾ. ಗುಬ್ಬಿ ವೀರಣ್ಣನವರು ರಂಗಭೂಮಿಯ ಬೋಧಿವೃಕ್ಷ.
ಬುದ್ಧನಿಗೆ ಬೋಧಿವೃಕ್ಷದ ಅಡಿಯಲ್ಲಿ ಜ್ಞಾನೋದಯವಾದ ಹಾಗೆ
ಅದಷ್ಟೋ ಜನ ಕಲಾವಿದರಿಗೆ ವೀರಣ್ಣನವರೆಂಬ ರಂಗಭೂಮಿಯ ಬೋಧಿವೃಕ್ಷದ ಅಡಿಯಲ್ಲಿ ಮತ್ತು ಆಶ್ರಯದಲ್ಲಿ ಕಲಾಸರಸ್ವತಿಯ ಸಾಕ್ಷಾತ್ಕಾರವಾಗಿದೆ. ಗುಬ್ಬಿಯಂತಿದ್ದ ಕಲಾವಿದರನ್ನು ಗರುಡನಂತೆ ಬೆಳೆಸಿದ
‘ಚಾರುಕೀರ್ತಿ’ ಗುಬ್ಬಿ ವೀರಣ್ಣನವರಿಗೆ ಸಲ್ಲುತ್ತದೆ.
ವೀರಣ್ಣನವರ ಕಾಲದಲ್ಲಿ ಕಲಾವಿದರು ದೈವಕೃಪೆಯನ್ನು ಪಡೆಯಲು
ಚಾರ್ ಧಾಮ್‌ಗಳಿಗೆ ಹೋಗುವ ಅವಶ್ಯಕತೆ ಇರಲಿಲ್ಲ.
ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಎಂಬ ಚಾರುಧಾಮಕ್ಕೆ
ಬಂದರೆ ಸಾಕು, ಅವರಿಗೆ ದೈವಕೃಪೆ ಮತ್ತು ಕಲಾಸರಸ್ವತಿಯ ಕೃಪೆ ಏಕಕಾಲಕ್ಕೆ ಆಗುತ್ತಿದ್ದವು.
ಗುಬ್ಬಿ ವೀರಣ್ಣನವರು ರಂಗಭೂಮಿಯ ಪ್ರತಿ ಅಂಗ ಅಂಗದಲ್ಲೂ ‘ರಂಗು’ ತುಂಬಿದ ಮಹಾನುಭಾವರು.
ಅವರು ರಂಗಭೂಮಿಯ ಜೀವಂತ ಪಾಠಶಾಲೆಯಾಗಿದ್ದರು.
ಕಲಾವಿದರು ಗುಬ್ಬಿ ವೀರಣ್ಣನವರನ್ನು ‘ತ್ರಿವಿಧ’ ದಾಸೋಹದ ಮೂರ್ತರೂಪವೆಂದು ಭಾವಿಸಿದ್ದರು.
ಗುಬ್ಬಿ ವೀರಣ್ಣನವರು ಕಲಾವಿದರ ಕಣ್ಣುಗಳಲ್ಲಿ
ಅನ್ನದಾಸೋಹ, ಅಭಿನಯದಾಸೋಹ ಮತ್ತು ಆಶ್ರಯದಾಸೋಹವೆಂಬೀ
ತ್ರಿವಿಧ ದಾಸೋಹಗಳ ಮೂರ್ತರೂಪವಾಗಿದ್ದರು.
ವೀರಣ್ಣನವರು ಬಡಕಲಾವಿದರನ್ನು ಕರೆದು ಅವರಿಗೆ ಅನ್ನ-ನೀರುಗಳನ್ನು
ನೀಡುವ ಮೂಲಕ ಅವರು ಕಲಾವಿದರ ಅನ್ನದಾತರಾಗಿದ್ದರು. ಹಾದಿ, ಬೀದಿಗಳಲ್ಲಿ
ಮತ್ತು ಅಲ್ಲಿ, ಇಲ್ಲಿ ಅಲೆದಾಡಿಕೊಂಡಿದ್ದ ಕಲಾವಿದರನ್ನು ಕರೆದು
ಅವರಿಗೆ ತಮ್ಮ ನಾಟಕ ಕಂಪನಿಯಲ್ಲಿ ‘ಆಶ್ರಯ’ ಕೊಡುವ ಮೂಲಕ
ಅವರು ಕಲಾವಿದರ ಪಾಲಿಗೆ ಆಶ್ರಯದಾತರಾಗಿದ್ದರು. ಮೊಗ್ಗಿನುಪಾಧಿಯಲ್ಲಿದ್ದ ಕಲಾವಿದರಿಗೆ
ಅಭಿನಯದ “ಅ ಆ ಇ ಈ” ಮತ್ತು “ಅ ಬ ಕ...”ಗಳನ್ನು ಹೇಳಿಕೊಟ್ಟು
ಅವರನ್ನು ಮೇರುಕಲಾವಿದರನ್ನಾಗಿಸುವ ಮೂಲಕ ಅವರು ಕಲಾವಿದರ ಅದೃಷ್ಟದಾತರಾಗಿದ್ದರು.
ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್, ಅಭಿನಯಚತುರ ಬಾಲಕೃಷ್ಣ, ನಗೆಮಾರಿ ತಂದೆಯಂತಿದ್ದ ನರಸಿಂಹರಾಜ್ ಇವರೇ ಮೊದಲಾದ ರಂಗಭೂಮಿ ಮತ್ತು ಕನ್ನಡ ಚಿತ್ರರಂಗದ ದಿಗ್ಗಜರು ವೀರಣ್ಣನವರ ರಂಗ-ಗರಡಿಯಲ್ಲಿ ಪಳಗಿ ಮೇರುಗಿರಿಯಾಗಿ ಮತ್ತು ಮಂದರಪರ್ವತವಾಗಿ ಬೆಳೆದು ನಿಂತುಕೊಂಡರು.
ಕಲಾವಿದರ ಅನ್ನದಾತ, ಆಶ್ರಯದಾತ ಮತ್ತು ಅದೃಷ್ಟದಾತ ಗೌರವಕ್ಕೆ ಪಾತ್ರರಾದ
ಗುಬ್ಬಿ ವೀರಣ್ಣನವರು ನಮ್ಮ ಈ ‘ಕಲ್ಪತರು’ ಖ್ಯಾತಿಯ ತುಮಕೂರು ಜಿಲ್ಲೆಯನ್ನು
ಕಲಾವಿದರ ಕಲ್ಪತರು ಮತ್ತು ಕಾಮಧೇನುವಾಗಿಸಿದರು.
ಇವತ್ತು ಅವರ ನಾಮಧೇಯವನ್ನು ಹೊಂದಿದ ತುಮಕೂರು ನಗರದ
ಕಲಾಕ್ಷೇತ್ರವು ಸಹಸ್ರಾರು ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಒಂದು ಸುಸಜ್ಜಿತ ಮತ್ತು ಶಕ್ತಿಶಾಲಿ ವೇದಿಕೆಯಾಗಿ ನಿಂತುಕೊಂಡಿದೆ. ಅಂದು ಗುಬ್ಬಿ ವೀರಣ್ಣನವರ ನಾಟಕ ಕಂಪನಿಯು ಪೌರಾಣಿಕ ಮತ್ತು ಐತಿಹಾಸಿಕ
ನಾಟಕಗಳನ್ನು ಆಡುವ ಮೂಲಕ ಜನಮನವನ್ನು ಗೆದ್ದುಕೊಂಡಿತ್ತು.
ಇವತ್ತು ಅವರ ಹೆಸರಿನಲ್ಲಿರುವ ಈ ಕಲಾಕ್ಷೇತ್ರದಲ್ಲಿ, ನಾವು ಗಮನಿಸಿದ ಹಾಗೆ, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ
ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ಪ್ರದರ್ಶನವಾಗುತ್ತಿರುವುದು ನಿಜಕ್ಕೂ ಕಾಕತಾಳೀಯ.
ಗುಬ್ಬಿ ವೀರಣ್ಣನವರಿಗಿದ್ದ ಪೌರಾಣಿಕ ನಾಟಕಗಳ ನಂಟು ಅವರ ಹೆಸರಲ್ಲಿರುವ
ಈ ರಂಗಮಂದಿರಕ್ಕೂ ಅಂಟಿಕೊಂಡಿದೆ ಎಂದು ನಮಗನಿಸುತ್ತದೆ” ಎಂದು
ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶಿವಾನಂದ ಶಿವಾಚಾರ್ಯರು
ನಿನ್ನೆ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗಭೂಮಿಯ
ಹಿರಿಯ ಕಲಾವಿದರಾದ ಮತ್ತು ಹಾರ್ಮೋನಿಯಮ್ ಮಾಸ್ಟರ್ ಖ್ಯಾತಿಯ ಶ್ರೀ ಹೆಚ್. ಎಮ್. ರಂಗನಾಥಯ್ಯ
ಮತ್ತು ರಂಗಭೂಮಿಯ ಹಿರಿಯ ಕಲಾವಿದರಾದ ಮತ್ತು ‘ಕಲಾರತ್ನ’ ಪ್ರಶಸ್ತಿ ಪುರಸ್ಕೃತರಾದ
ಶ್ರೀ ಟಿ. ವೆಂಕಟೇಶಯ್ಯನವರಿಗೆ ‘ಬೆಳ್ಳಿ ಕಿರೀಟಧಾರಣೆ’ಯ ಕಾರ್ಯಕ್ರಮವನ್ನು ನಡೆಯಿಸಿಕೊಡುತ್ತ
ತಮ್ಮ ಆಶೀರ್ವಚನ ಸಂದೇಶದಲ್ಲಿ ಈ ಮೇಲಿನ ಮಾತುಗಳನ್ನು ಹೇಳಿದರು.
ಶ್ರೀ ಶ್ರೀಗಳು ಮತ್ತೆ ಮುಂದುವರಿದು, “ಅವತ್ತಿನ ಕಾಲಘಟ್ಟದಲ್ಲಿ ನಾಟಕಗಳು ಸ್ಪರ್ಧಾತೀತವಾಗಿದ್ದವು.
ಅವತ್ತಿನ ದಿನಮಾನಗಳಲ್ಲಿ ನಾಟಕಗಳೇ ಮನರಂಜನೆಯ ಪ್ರಧಾನ ಆಕರಗಳಿದ್ದವು.
ಮನರಂಜನೆ ಮತ್ತು ಜ್ಞಾನಾರ್ಜನೆಗೆ ಕಥಾ-ಕೀರ್ತನ
ಮತ್ತು ನಾಟಕಗಳನ್ನು ಬಿಟ್ಟರೆ ಇನ್ನೊಂದು ಪರ್ಯಾಯವೇ ಇರಲಿಲ್ಲ.
ಅವು ಏಕಮೇವಾದ್ವಿತೀಯವಾಗಿದ್ದವು. ಆದರೆ ಇವತ್ತು ಪರಿಸ್ಥಿತಿ ಹಾಗಿಲ್ಲ.
ಇವತ್ತು ಪೌರಾಣಿಕ ನಾಟಕಗಳೇ ಇರಲಿ, ಸಾಮಾಜಿಕ ನಾಟಕಗಳೇ ಇರಲಿ,
ಅವು ಇತರ ಮನರಂಜನಾ ಮಾಧ್ಯಮಗಳಿಂದ ಪ್ರಬಲವಾದ ಪ್ರತಿಸ್ಪರ್ಧೆಯನ್ನು ಎದುರಿಸಿಕೊಂಡಿರಬೇಕಾಗಿದೆ.
ಇವತ್ತಿನ ದಿನಗಳಲ್ಲಿ ಜನಗಳ ಮನರಂಜಿಸಲು ಮಾಧ್ಯಮಗಳು ಸರ್ವತೋಮುಖಿಯಾಗಿ ಕೆಲಸಮಾಡುತ್ತಿವೆ.
ಅವು ದಿನದ ೨೪ ಗಂಟೆಗಳ ಕಾಲ ಮತ್ತು ವಾರದ ಏಳೂ ದಿನ
ಅಂದರೆ “೨೪x೭” ಫಾರ್ಮುಲಾದ ಅಡಿಯಲ್ಲಿ ಜನಗಳಿಗೆ ಮನರಂಜನೆ ನೀಡುತ್ತಿವೆ.
ಈ ಮೊದಲು ಬದುಕಿನಲ್ಲಿ ಮನರಂಜನೆ ಇರುತ್ತಿತ್ತು.
ಆದರೆ ಈಗ ನಮ್ಮ ಮಾಧ್ಯಮಗಳು ಬದುಕನ್ನೇ ಮನರಂಜನೆಯಾಗಿಸಿಬಿಟ್ಟಿವೆ.
ಗಂಡ-ಹೆಂಡತಿಯರ ಜಗಳದಿಂದ ಮೊದಲುಮಾಡಿಕೊಂಡು
ಅತ್ತೆ-ಸೊಸೆಯರ ಜಗಳದವರೆಗೆ ಎಲ್ಲವನ್ನೂ ತಂದು ಅವು ನಮ್ಮ ಕಣ್ಣೆದುರಿಗೆ
ಮತ್ತು ನಮ್ಮ ಕಿವಿಗಳ ಮೇಲೆ ಹಾಕುತ್ತಿವೆ
ದೂರದಲ್ಲಿರುವುದನ್ನೆಲ್ಲ ‘ದರ್ಶನ’ ಮಾಡಿಸುವ ಗುತ್ತಿಗೆಯನ್ನು
ಹಿಡಿದಿರುವ ದೂರದರ್ಶನದ ಡಬ್ಬಾಗಳು (ಪೆಟ್ಟಿಗೆಗಳು) ನಮ್ಮ-ನಿಮ್ಮಗಳ ಮನೆ-ಮಠಗಳನ್ನೇ ಸಿನೇಮಾ ಮಂದಿರ ಮತ್ತು ನಾಟಕಗೃಹಗಳನ್ನಾಗಿ ಮಾಡಿಬಿಟ್ಟಿವೆ. ಇಂಥ ವಿಪರೀತದ ಸಂದರ್ಭದಲ್ಲಿ
ನಾಟಕಗಳನ್ನು ನೆಚ್ಚಿಕೊಂಡು ಮತ್ತು ಕಚ್ಚಿಕೊಂಡು ಕುಳಿತುಕೊಳ್ಳುವುದು ತುಂಬ ಕಷ್ಟದ ಕೆಲಸ. ಆದರೂ ತುಮಕೂರು ಜಿಲ್ಲೆ ಮತ್ತು ಈ ಜಿಲ್ಲೆಯ ಕಲಾವಿದರು ರಂಗಭೂಮಿಯನ್ನು ಮತ್ತು ನಮ್ಮ ದೇಶದ ಸಾಂಸ್ಕೃತಿಕ ರಾಯಭಾರಿ ಮತ್ತು ಪ್ರತಿನಿಧಿಗಳಂತಿರುವ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳನ್ನು
ಜೀವಂತವಾಗಿರಿಸಲು ‘ಹರಸಾಹಸ’ ಮತ್ತು ‘ಹರಿಸಾಹಸ’ ಮಾಡುತ್ತಿರುವುದು
ನಿಜಕ್ಕೂ ಅಭಿನಂದನೀಯ ಮತ್ತು ಶ್ಲಾಘನೀಯ.
ತುಮಕೂರು ಜಿಲ್ಲೆಯ ಈ ನಮ್ಮ ಜನಗಳಿಗೆ ಕಲಾವಿದರನ್ನು ಬೆಳೆಸುವುದು, ಮತ್ತವರನ್ನು ಬಳಸುವುದು
ಹಾಗೂ ಅವರನ್ನು ಗೌರವಿಸುವುದು....., ಈ ಎಲ್ಲವೂ ಚೆನ್ನಾಗಿ ಗೊತ್ತು.
ಇವತ್ತು ರಂಗಭೂಮಿಯ ಇಬ್ಬರು ಹಿರಿಯ ಕಲಾವಿದರಿಗೆ ನೀವುಗಳು ಬೆಳ್ಳಿಕಿರೀಟದ ಗೌರವವನ್ನು ನೀಡಿರುವುದು ನಿಜಕ್ಕೂ ಹೆಮ್ಮೆಪಡುವಂಥ ಸಂಗತಿ. ಅದರಲ್ಲೂ ಹಾರ್ಮೋನಿಯಮ್ ಮಾಸ್ಟರ್
ಶ್ರೀ ಹೆಚ್. ಎಮ್. ರಂಗನಾಥಯ್ಯನವರು
ಮತ್ತು ಶ್ರೀ ಟಿ. ವೆಂಕಟೇಶಯ್ಯನವರು ಗುರು-ಶಿಷ್ಯರು. ಗುರು-ಶಿಷ್ಯರಿಬ್ಬರಿಗೆ ಏಕಕಾಲದಲ್ಲಿ
ಒಂದೇ ವೇದಿಕೆಯ ಮೇಲೆ ಬೆಳ್ಳಿಕಿರೀಟಧಾರಣೆ ಮಾಡಿರುವುದು
ನಿಜಕ್ಕೂ ಒಂದು ಅವಿಸ್ಮರಣೀಯ ಮತ್ತು ಪುನಃ ಪುನಃ ಸ್ಮರಣೀಯ ಕ್ಷಣ!!
ನಮಗೆ, ಈ ವೇದಿಕೆಯಲ್ಲಿ ರಂಗನಾಥಯ್ಯನವರು ದ್ರೋಣರಾಗಿ ಮತ್ತು ವೆಂಕಟೇಶಯ್ಯನವರು
ಅರ್ಜುನನಾಗಿ ಕಾಣುತ್ತಿದ್ದಾರೆ. ಇವತ್ತು ಈ ವೇದಿಕೆಯಲ್ಲಿ
ದ್ರೋಣಾರ್ಜುನರ ಉಪಾಧಿಯಲ್ಲಿರುವ ಗುರು-ಶಿಷ್ಯರಿಬ್ಬರಿಗೂ “ಸಮಾನ ಗೌರವ” ದೊರಕಿದೆ.
ಇಂಥ ಒಂದು ಅಪರೂಪದ ಮತ್ತು ಅವಿಸ್ಮರಣೀಯ ಅಭಿನಂದನಾ ಸಮಾರಂಭವನ್ನು
ಸಂಯೋಜಿಸಿದ ಹೆಬ್ಬೂರಿನ ತುಮಕೂರು ತಾಲ್ಲೂಕು ಕಲಾವಿದರ ಸಾಂಸ್ಕೃತಿಕ ಸಂಶೋಧನಾ ಸಂಸ್ಥೆ,
ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಹೊನ್ನಾಪುರದ ಶ್ರೀ ನಾಗಲಕ್ಷ್ಮೀ ರಂಗಕೀರ್ತನ ಸಂಘ, ಶ್ರೀ ಹೆಚ್. ಎಮ್. ರಂಗನಾಥಯ್ಯ ಮತ್ತು ಶ್ರೀ ಟಿ. ವೆಂಕಟೇಶಯ್ಯ ಇವರುಗಳ ಅಭಿಮಾನಿ ಬಳಗಕ್ಕೆ ಹಾಗೂ ತುಮಕೂರು ಜಿಲ್ಲೆಯ ಎಲ್ಲ ಕಲಾವಿದರಿಗೂ ಮತ್ತು ಕಲಾಭಿಮಾನಿಗಳಿಗೂ ನಾವು ಹೃತ್ಪೂರ್ವಕವಾಗಿ ಶುಭಹಾರೈಸುತ್ತೇವೆ” ಎಂದು ಹೇಳಿದರು.
ಸಮಾರಂಭದಲ್ಲಿ ವಾಲ್ಮೀಕಿ ಪೀಠದ ಶ್ರೀ ಸಂಜಯ್‌ಕುಮಾರ್ ಸ್ವಾಮಿಗಳು,
ಚಿಕ್ಕಮ್ಮ ದೇವಸ್ಥಾನದ ಪಾಪಣ್ಣನವರು, ಸಂಸದ ಶ್ರೀ ಎಸ್. ಪಿ. ಮುದ್ದಹನುಮೇಗೌಡರು,
ಶ್ರೀ ಹೆಚ್. ನಿಂಗಪ್ಪನವರು, ಗಂಗರಾಜು, ಪಾಂಡುರಂಗಶೆಟ್ಟರು
ಹಾಗೂ ಇವರೇ ಮೊದಲಾದ ಗಣ್ಯಮಾನ್ಯರು ಉಪಸ್ಥಿತರಿದ್ದು ಕಲಾವಿದರಿಗೆ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ೧೪ ವರುಷದ ಒಳಗಿನ ಮಕ್ಕಳು
ಶ್ರೀ ಸುಭದ್ರಾ ಕಲ್ಯಾಣ (ಪಾರ್ಥವಿಜಯ) ಎಂಬ ಪೌರಾಣಿಕ ನಾಟಕದ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರವು
ಕಲಾಭಿಮಾನಿಗಳಿಂದ ಕಿಕ್ಕಿರಿದು ತುಂಬಿಕೊಂಡಿತ್ತು.
ರಂಗಭೂಮಿ ಮತ್ತು ಕಲಾಕ್ಷೇತ್ರಗಳ ತ್ರಿವಿಧ ದಾಸೋಹಿ
ದಿವಂಗತ ಡಾ. ಗುಬ್ಬಿ ವೀರಣ್ಣನವರು
ಡಾ. ಶ್ರೀ ಶಿವಾನಂದ ಶಿವಾಚಾರ್ಯರು

No comments:
Post a Comment