Good Morning
26th December 2015
@ Hiremath, Tumkur
ಒಣ ವೇದಾಂತವನ್ನು ಹೇಳಿಕೊಂಡಿರುವುದರಿಂದ
ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ?
ಬಾಹೂರು ಬೊಮ್ಮಣ್ಣನವರ ಜನ್ಮಸ್ಥಳ.
ಇವರು ತೋಟಗಾರಿಕೆಯನ್ನು ತಮ್ಮ ಕಾಯಕವನ್ನಾಗಿ ಸ್ವೀಕರಿಸಿ
ಆ ಕಾಯಕವನ್ನೇ ತಮ್ಮ ಕೈಲಾಸವಾಗಿಸಿಕೊಂಡಿದ್ದರು.
ಇವರು ಬಸವಣ್ಣನವರ ಅಪ್ಪಟ ಅಭಿಮಾನಿಗಳು.
ತಮ್ಮ ಪ್ರತಿಯೊಂದು ವಚನದಲ್ಲೂ ತಮ್ಮ ಇಷ್ಟದೈವ
ಬ್ರಹ್ಮೇಶ್ವರಲಿಂಗಕ್ಕಿಂತಲೂ ಮುಂಚೆ ‘ಸಂಗನಬಸವಣ್ಣ’ ಎಂದು
ಅವರು ಬಸವಣ್ಣನವರನ್ನು ಸ್ಮರಿಸಿಕೊಳ್ಳುತ್ತಾರೆ.
ತಮ್ಮ ಸಮಕಾಲೀನ ಶರಣರ ಮೇಲೆ ಬಸವಣ್ಣನವರು
ಅದೆಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದ್ದರು ಎಂಬುವುದಕ್ಕೆ
ಬಾಹೂರ ಬೊಮ್ಮಣ್ಣನವರ ಬಸವಾಭಿಮಾನವೇ ಸಾಕ್ಷಿ.
ಪ್ರಸ್ತುತ ವಚನವನ್ನು ಗಮನಿಸಿದಾಗ ಬೊಮ್ಮಣ್ಣನವರು
ತುಂಬ ತುಂಬಾನೇ ‘ಪ್ರ್ಯಾಕ್ಟಿಕಲ್’ ಆಗಿ ವಿಚಾರಮಾಡುತ್ತಿದ್ದರು
ಎಂಬ ಅಂಶವು ಗಮನಕ್ಕೆ ಬರುತ್ತದೆ.
ಬೊಮ್ಮಣ್ಣನವರು ವಾಸ್ತವವಾದಿಗಳಾಗಿದ್ದರು.
ಅವರು ಭಾವನೆಗಳಲ್ಲಿ ತೇಲಿಹೋಗುತ್ತಿರಲಿಲ್ಲ.
ಭಾವುಕರ ಮಾತುಗಳ ಮಧ್ಯದಲ್ಲಿ ಅವರು ಕಳೆದುಹೋಗುತ್ತಿರಲಿಲ್ಲ.
ದಂತಗೋಪುರ, ಗಗನಕುಸುಮ, ಶಶವಿಷಾಣ ಮತ್ತು ಸ್ವಕಪೋಲಕಲ್ಪಿತಕಥೆಗಳಿಗೆ
ಅವರು ಉಪ್ಪು-ಸೊಪ್ಪು ಹಾಕುತ್ತಿರಲಿಲ್ಲ.
ಉಪರೋಕ್ತ ವಚನದ ವರಸೆಯನ್ನು ನೋಡಿದರೆ
ಅವರು ಗಾಳಿಯಲ್ಲಿ ಗೋಪುರ ಕಟ್ಟುವ ಜಾಯಮಾನದ ಜನಗಳನ್ನು
ನಂಬುವ ಮತ್ತು ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ಸ್ವಭಾವದವರಲ್ಲ
ಎಂಬ ಅಂಶವು ಸ್ಪಷ್ಟವಾಗುತ್ತದೆ.
“ಯಾವುದು ಎಲ್ಲಿರಬೇಕೋ ಅಲ್ಲಿದ್ದರೇನೇ ಚೆಂದ. ಯಾರು ಏನನ್ನು ಮಾಡಿಕೊಂಡಿರಬೇಕೋ ಅವರದನ್ನು ಮಾಡಿಕೊಂಡಿದ್ದರೇನೇ ಚೆಂದ”
ಎಂಬರ್ಥದಲ್ಲಿ ಪ್ರಸ್ತುತ ವಚನದಲ್ಲಿ ಅವರು ಮಾತನಾಡಿದ್ದಾರೆ.
“ಎಲ್ಲರೂ ಒಂದು. ಎಲ್ಲರಲ್ಲಿರುವ ಆತ್ಮ ಒಂದೇ. ಎಲ್ಲರೂ ಸಮಾನರು.
ಭೇದಭಾವ ಸಲ್ಲದು. ಎಲ್ಲರಲ್ಲಿರುವ ಚೈತನ್ಯ ಒಂದೇ...”
ಎಂಬಿತ್ಯಾದಿ ಮಾತುಗಳು ಸಭೆ, ಸಮಾರಂಭಗಳಿಗೆ ಮಾತ್ರ ಭೂಷಣಪ್ರಾಯವೆನಿಸಬಹುದು.
ಇಂಥ ಸಭಾಭೂಷಣ ಮಾತುಗಳು ವಾಸ್ತವಕ್ಕೆ ಹತ್ತಿರವಾಗಿ
ಮತ್ತು ವಾಸ್ತವದೊಂದಿಗೆ ತಾದಾತ್ಮ್ಯಗೊಂಡು ನಿಂತುಕೊಳ್ಳುವುದು ಕಷ್ಟಸಾಧ್ಯ.
ಇಂಥ ಮಾತುಗಳು ಕೇವಲ ‘ಭಾಷಣಪ್ರಿಯ’ ಮತ್ತು ‘ಭೂಷಣಪ್ರಿಯ’ ಸಂಸ್ಕೃತಿಗೆ ಮಾತ್ರ ಸೀಮಿತಗೊಂಡಿರುತ್ತವೆ. ಸಮಾಜದ ಮುಖ್ಯವಾಹಿನಿಯಲ್ಲಿ ಏಕರೂಪ ಸಂಹಿತೆಯಾಗಲಿ ಅಥವಾ ಅದ್ವೈತ ತತ್ತ್ವವಾಗಲಿ ಸಾರ್ವಭೌಮವಾಗಿ ನಿಂತುಕೊಳ್ಳುವುದು ‘ಅಸಾಧ್ಯ’
ಮತ್ತು ಅದು ‘ಅಹೋಕಷ್ಟಪ್ರದ’!
ಸಮಾಜದ ಮುಖ್ಯವಾಹಿನಿಯ ನಾಡಿಮಿಡಿತವನ್ನು ಚೆನ್ನಾಗಿ ತಿಳಿದುಕೊಂಡಿರುವ ಬೊಮ್ಮಣ್ಣನವರು ಪ್ರಸ್ತುತ ವಚನದಲ್ಲಿ ಸೂಕ್ತ ಹಾಗೂ ಸಮುಚಿತ ಉದಾಹರಣೆಗಳೊಂದಿಗೆ ಆ ವಿಷಯವನ್ನು ನಮಗೆಲ್ಲ ಅರ್ಥವಾಗುವ ಹಾಗೆ ಮಂಡಿಸಲು ಯತ್ನಿಸಿದ್ದಾರೆ.
ಬೊಮ್ಮಣ್ಣನವರು ಕೇಳುತ್ತಾರೆ,
“ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ?
ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ?” ಎಂದು.
“ಬಾಯಿಯಲ್ಲೂ ಆತ್ಮ ಇದೆ. ನಾಸಿಕ ಅಂದರೆ ಮೂಗಿನಲ್ಲೂ ಆತ್ಮ ಇದೆ”
ಎಂದು ಬಾಯಿ ಮುಚ್ಚಿಕೊಂಡು ಮೂಗಿನಿಂದ ಊಟಮಾಡುವುದಕ್ಕೆ ಆಗುತ್ತದೆಯೇ? ಸಾಧ್ಯವೇ ಇಲ್ಲ ತಾನೆ?
ಅದೇ ರೀತಿ ಉಸಿರಾಟಕ್ರಿಯೆಗೆಂದೇ ನಿಯೋಜಿತಗೊಂಡಿರುವ
ಮೂಗನ್ನು ಪಕ್ಕಕ್ಕಿಟ್ಟು ಬಾಯಲ್ಲೂ ಆತ್ಮ ಇದೆ ಎಂದು
ಬಾಯಿಯಿಂದ ಉಸಿರಾಡಿಕೊಂಡಿರುವುದಕ್ಕೆ ಆಗುತ್ತದೆಯೇ?
ವಾಸ್ತವದಲ್ಲಿ ಇದು ಸಾಧ್ಯವೇ?
ಬಾಯಿ ಮಾಡುವ ಕೆಲಸವನ್ನು ‘ಬಾಯಿ’ ಮಾಡಬೇಕು.
ಮೂಗು ಮಾಡುವ ಕೆಲಸವನ್ನು ‘ಮೂಗು’ ಮಾಡಬೇಕು.
ಷಡ್ರಸಗಳನ್ನು ರುಚಿಸುವ ಕಾರ್ಯಪ್ರಣಾಳಿಯದು ನಾಲಿಗೆ ಅಥವಾ ಬಾಯಿಗೆ ಸೇರಿದ್ದು.
ಅದಕ್ಕೋಸ್ಕರ ನಾಲಿಗೆ (ಬಾಯಿ) ರುಚಿಯನ್ನು
‘ಗ್ರಹಿಸುವ’ ಇಲ್ಲವೆ ‘ನಿಗ್ರಹಿಸುವ’ ಕೆಲಸವನ್ನು ಮಾತ್ರ ಮಾಡಬೇಕು.
ಇನ್ನು ಗಂಧ, ಸುಗಂಧ, ದುರ್ಗಂಧ ಇತ್ಯಾದಿಗಳ ವಾಸನೆಯನ್ನು ಗ್ರಹಿಸಿಬಿಟ್ಟು
ವಾಸನೆಯದು ಉಸಿರಾಟಕ್ಕೆ ಅರ್ಹವೋ, ಅನರ್ಹವೋ
ಎಂದು ತೀರ್ಮಾನಿಸುವುದು ಮೂಗಿನ ಕೆಲಸ.
ಆ ಕೆಲಸವನ್ನು ಅದುವೇ ಮಾಡಿಕೊಂಡಿರಬೇಕು.
ಜಿಹ್ಹೇಂದ್ರಿಯ ಮತ್ತು ಘ್ರಾಣೇಂದಿಯಗಳು ತಮ್ಮ ತಮ್ಮ ಕೆಲಸ, ಕಾರ್ಯಗಳನ್ನು
ಅದೇನೇ ಆದರೂ, ದಂದಣ-ದತ್ತಣವೆಂದರೂ ಸರಿ, ತಾವೇ ಮಾಡಿಕೊಂಡಿರಬೇಕು.
ಮತ್ತೆ ಮುಂದುವರಿದು ಬೊಮ್ಮಣ್ಣನವರು ಕೇಳುತ್ತಾರೆ,
“ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ?” ಎಂದು.
“ನೋಡುವುದು” ಕಣ್ಣಿನ ಕೆಲಸ. ಅದು ನೋಡಿಕೊಂಡಿರಬೇಕು, ಅಷ್ಟೇ.
ಇನ್ನು “ಕೇಳಿಸಿಕೊಳ್ಳುವುದು” ಕಿವಿಯ ಕೆಲಸ. ಅದು ಕೇಳಿಕೊಂಡಿರಬೇಕು, ಅಷ್ಟೇ!!
ಕಣ್ಣು-ಕಿವಿಗಳೆರಡೂ ಸೇರಿ ಮಾತನಾಡಿ ಒಂದು ಒಪ್ಪಂದಕ್ಕೆ ಬಂದು,
“ನಮ್ಮಿಬ್ಬರಲ್ಲಿರುವ ಆತ್ಮ ಒಂದೇ. ಅದಕ್ಕಾಗಿ ನಾವಿಬ್ಬರು ಪರಸ್ಪರ
ನಮ್ಮ ಕೆಲಸ-ಕಾರ್ಯಗಳನ್ನು “ಎಕ್ಸ್‌ಚೇಂಜ್” ಮಾಡಿಕೊಳ್ಳುವಾ”
ಎಂದರದು ಸಾಧ್ಯವೇ?
ಅಂಥ ಒಂದು “ಎಕ್ಸ್‌ಚೇಂಜ್ ಆಫರ್” ಜಾರಿಯಲ್ಲಿ ತರುವುದು ಸಾಧ್ಯವೇ?
ಅಸಾಧ್ಯ ತಾನೆ?
ಕಣ್ಣು ಕೇಳಿಸಿಕೊಳ್ಳಲರಿಯದು. ಕಿವಿ ನೋಡಲರಿಯದು.
ಆತ್ಮ ಒಂದೇ ಇದ್ದರೂ ಅವುಗಳಿಗೆ ನಿಗದಿತವಾದ ಕೆಲಸ-ಕಾರ್ಯಗಳನ್ನು
ಆಯಾ ಇಂದ್ರಿಯಗಳೇ ಮಾಡಿಕೊಂಡಿರಬೇಕು.
ಅವು ಸ್ವಸ್ಥಾನದಲ್ಲಿ ಅಂದರೆ ತಮ್ಮ ತಮ್ಮ ಸ್ಥಾನಗಳಲ್ಲಿ ಇದ್ದುಕೊಂಡು
ತಮ್ಮ ತಮ್ಮ ಕಾರ್ಯಗಳನ್ನು ಮಾಡಿಕೊಂಡಿದ್ದರೆ ಮಾತ್ರ ಚೆನ್ನ ಮತ್ತು ಚೆಲುವು.
ಇಲ್ಲವಾದರೆ ಎಲ್ಲವೂ ಯದ್ವಾತದ್ವಾ ಮತ್ತು ಎಡವಟ್ಟಾಗಿಬಿಡುತ್ತದೆ.
ಇನ್ನು ನಾವುಗಳು ಯಾವುದೇ ಕೆಲಸವನ್ನು ಒಮ್ಮೆ ನೆಚ್ಚಿಕೊಂಡು
ಅದನ್ನು ಮಾಡಲು ಒಪ್ಪಿಕೊಂಡಾದ ಮೇಲೆ
ಅಚಲವಾದ ನಿಷ್ಠೆ ಮತ್ತು ಅತೀವ ಶ್ರದ್ಧೆಯಿಂದ
ಆ ಕೆಲಸವನ್ನು ಮಾಡಿಕೊಂಡಿರಬೇಕು.
ಮಾಡುವ ಕೆಲಸದಲ್ಲಿ ನಿಷ್ಠೆ, ನಿಯತ್ತು, ಪ್ರೀತಿ, ವಿಶ್ವಾಸ ಬೇಕು.
“ಮನಸ್ಸೊಪ್ಪಿದ” ಮತ್ತು “ಮಾಡಲೊಪ್ಪಿಕೊಂಡ” ಕೆಲಸದಲ್ಲಿ ನಿಷ್ಠೆ ಇದ್ದರೆ ಮಾತ್ರ
ಅದು ‘ಭಕ್ತಿ’ ಎನಿಸುತ್ತದೆ. ಮತ್ತು ಅಂಥ ಒಂದು ಭಕ್ತಿಯೇ
ದೇವತಾಶಕ್ತಿಯನ್ನು ಅರಿಯುವುದಕ್ಕೆ ಭಿತ್ತಿಯಾಗಿ (ಭಿತ್ತಿ = ಗೋಡೆ) ನಿಂತುಕೊಳ್ಳುತ್ತದೆ.
ಇಲ್ಲಿ ಸಾಂದರ್ಭಿಕವಾಗಿ ‘ಭಿತ್ತಿ’ ಎಂಬ ಪದಕ್ಕೆ
’ಮೂಲಪಾಠ’ ಮತ್ತು ‘ಮೂಲಪಠ್ಯ’ ಎಂದು ಕೂಡ ಅರ್ಥಮಾಡಿಕೊಳ್ಳಬಹುದು.
ಭಕ್ತಿಯೇ ನಮಗೆಲ್ಲ ದೈವದ ಅರಿವು ಮಾಡಿಕೊಡುವ
ಮೂಲದ್ರವ್ಯ ಮತ್ತು ಭಕ್ತಿಮಾರ್ಗವೇ ನಮ್ಮಗಳಿಗೆ
ಅರಿವಿನ ದಾರಿತೋರುವ ಮೊದಲ ದಾರಿದೀಪ.
ವೃಥಾ ಅದು ಹಾಗೆ, ಇದು ಹೀಗೆ. ದೇವರು ಎಲ್ಲೆಲ್ಲೂ ಇದ್ದಾನೆ,
ಹಾಗೆ, ಹೀಗೆ ಎಂದು ವೇದಾಂತಿಯ ಹಾಗೆ ಮಾತನ್ನಾಡುತ್ತ ಕುಳಿತುಕೊಳ್ಳಬೇಡಿ.
ಈ ಶುಷ್ಕವೇದಾಂತ ಮತ್ತು ವೇದಾಂತದ ಆಲಾಪ-ಪ್ರಲಾಪಗಳಿಂದ
ಏನನ್ನೂ ಸಾಧಿಸಲು ಆಗುವುದಿಲ್ಲ.
ಆದ್ದರಿಂದ ಭಕ್ತಿಮಾರ್ಗದಲ್ಲಿ ನಡೆದು
ಈಪ್ಸಿತ ಮತ್ತು ಇಷ್ಟಾರ್ಥವನ್ನು ಪಡೆದುಕೊಳ್ಳುವುದು ಉತ್ತಮ”
ಎಂದು ಬೊಮ್ಮಣ್ಣನವರು ಪ್ರಸ್ತುತ ವಚನದಲ್ಲಿ
ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
“ದೇವರು ಎಲ್ಲ ಕಡೆಗಳಲ್ಲೂ ಇದ್ದಾನೆ” ಎಂಬ ಮಾತನ್ನು ನಾವು ಒಪ್ಪಬೇಕು.
ಹಾಗೆಂದಮಾತ್ರಕ್ಕೆ ಮಂತ್ರಾಲಯಕ್ಕೂ ಮತ್ತು ಮದಿರಾಲಯಕ್ಕೂ
ಏನೂ ವ್ಯತ್ಯಾಸವಿಲ್ಲವೆಂದು ‘ವಾಗ್ವಾದ’ ಮಾಡುವುದಾಗಲಿ
ಅಥವಾ ‘ವಾಗ್ಯುದ್ಧ’ ಮಾಡುವುದಾಗಲಿ ಸರಿಯಲ್ಲ.
ಏನಿದ್ದರೂ ದೇವಾಲಯ ದೇವಾಲಯವೇ!
ಮಂತ್ರಾಲಯ ಮಂತ್ರಾಲಯವೇ!!
ಮದಿರಾಲಯ ಮದಿರಾಲಯವೇ!!!
ಮಂತ್ರಾಲಯದ ಹಾಗೆ ಮದಿರಾಲಯದಲ್ಲೂ ದೇವರಿರಬಹುದು.
ಆದರೆ ದೇವಾಲಯದ ಪರಿಸರಕ್ಕೂ ಮತ್ತು ಮದಿರಾಲಯದ ಪರಿಸರಕ್ಕೂ ಅ
ಜಗಜಾಂತರವಿರುವ ವಿಷಯವನ್ನು ಗಮನಬಾಹಿರವಾಗಿಸುವುದು ಸರಿಯಲ್ಲ.
ದೇವಾಲಯ ಮತ್ತು ಮದಿರಾಲಯಗಳ
ಪಾತ್ರತೆ ಮತ್ತು ಪರಿಸರದಲ್ಲಿ ಭಿನ್ನತೆ ಇರುವುದರಿಂದ
ಆ ಪಾತ್ರತೆ ಮತ್ತು ಪರಿಸರಕ್ಕೆ ಅನುಗುಣವಾಗಿ ನಾವುಗಳು ವರ್ತಿಸಿಕೊಂಡಿರಬೇಕು
ಎಂಬುವುದು ಪ್ರಸ್ತುತ ವಚನದ ತಾತ್ಪರ್ಯ.
ಎಲ್ಲ ಕಡೆಗಳಲ್ಲೂ ಮತ್ತು ಎಲ್ಲ ಸಂದರ್ಭಗಳಲ್ಲೂ
ವೇದಾಂತದ ಮಾತನ್ನಾಡಿಕೊಂಡು ಮೂಗು ತೂರಿಸಿಕೊಂಡಿರುವುದು ಸರಿಯಲ್ಲ
ಎಂದು ಬೊಮ್ಮಣ್ಣನವರು ವೇದಾಂತಿಗಳಿಗೆ ಪ್ರಸ್ತುತ ವಚನದಲ್ಲಿ
ಎಚ್ಚರಿಕೆಯ ಗುಟುರುಹಾಕುತ್ತ ಒಂದು ಸೂಕ್ಷ್ಮವಾದ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
26th December 2015
@ Hiremath, Tumkur
ಒಣ ವೇದಾಂತವನ್ನು ಹೇಳಿಕೊಂಡಿರುವುದರಿಂದ
ಏನೂ ಪ್ರಯೋಜನವಿಲ್ಲ -
ಡಾ. ಶ್ರೀ ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ?
ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ?
ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ?
ಇಂತೀ ಇವಕ್ಕೆ ಆತ್ಮ ಒಂದೆಂದಡೆ
ತಮ್ಮ ತಮ್ಮ ಸ್ವಸ್ಥಾನಂಗಳಲ್ಲಿ ಅಲ್ಲದೆ ದೃಷ್ಟವ ಕಾಣಬಾರದು.
ಆವ ಸ್ಥಲ ನೆಮ್ಮಿದಡೂ ಆ ಸ್ಥಲಕ್ಕೆ ವಿಶ್ವಾಸ ಬೇಕು.
ಇದು ಸಂಗನಬಸವಣ್ಣನ ಭಕ್ತಿ.
ಬ್ರಹ್ಮೇಶ್ವರಲಿಂಗವನರಿವುದಕ್ಕೆ ಇಕ್ಕಿದ ಭಿತ್ತಿ.
ಇದು ಶರಣ ಬಾಹೂರ ಬೊಮ್ಮಣ್ಣನವರ ವಚನ.
“ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗ” - ಇದು ಬಾಹೂರ ಬೊಮ್ಮಣ್ಣನವರ ವಚನಾಂಕಿತ.
ಸದ್ಯದ ವಿಜಯಪುರ ಜಿಲ್ಲೆಗೆ ಸೇರಿದ ಮುದ್ದೇಬಿಹಾಳ ತಾಲ್ಲೂಕಿನಬಾಹೂರು ಬೊಮ್ಮಣ್ಣನವರ ಜನ್ಮಸ್ಥಳ.
ಇವರು ತೋಟಗಾರಿಕೆಯನ್ನು ತಮ್ಮ ಕಾಯಕವನ್ನಾಗಿ ಸ್ವೀಕರಿಸಿ
ಆ ಕಾಯಕವನ್ನೇ ತಮ್ಮ ಕೈಲಾಸವಾಗಿಸಿಕೊಂಡಿದ್ದರು.
ಇವರು ಬಸವಣ್ಣನವರ ಅಪ್ಪಟ ಅಭಿಮಾನಿಗಳು.
ತಮ್ಮ ಪ್ರತಿಯೊಂದು ವಚನದಲ್ಲೂ ತಮ್ಮ ಇಷ್ಟದೈವ
ಬ್ರಹ್ಮೇಶ್ವರಲಿಂಗಕ್ಕಿಂತಲೂ ಮುಂಚೆ ‘ಸಂಗನಬಸವಣ್ಣ’ ಎಂದು
ಅವರು ಬಸವಣ್ಣನವರನ್ನು ಸ್ಮರಿಸಿಕೊಳ್ಳುತ್ತಾರೆ.
ತಮ್ಮ ಸಮಕಾಲೀನ ಶರಣರ ಮೇಲೆ ಬಸವಣ್ಣನವರು
ಅದೆಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದ್ದರು ಎಂಬುವುದಕ್ಕೆ
ಬಾಹೂರ ಬೊಮ್ಮಣ್ಣನವರ ಬಸವಾಭಿಮಾನವೇ ಸಾಕ್ಷಿ.
ಪ್ರಸ್ತುತ ವಚನವನ್ನು ಗಮನಿಸಿದಾಗ ಬೊಮ್ಮಣ್ಣನವರು
ತುಂಬ ತುಂಬಾನೇ ‘ಪ್ರ್ಯಾಕ್ಟಿಕಲ್’ ಆಗಿ ವಿಚಾರಮಾಡುತ್ತಿದ್ದರು
ಎಂಬ ಅಂಶವು ಗಮನಕ್ಕೆ ಬರುತ್ತದೆ.
ಬೊಮ್ಮಣ್ಣನವರು ವಾಸ್ತವವಾದಿಗಳಾಗಿದ್ದರು.
ಅವರು ಭಾವನೆಗಳಲ್ಲಿ ತೇಲಿಹೋಗುತ್ತಿರಲಿಲ್ಲ.
ಭಾವುಕರ ಮಾತುಗಳ ಮಧ್ಯದಲ್ಲಿ ಅವರು ಕಳೆದುಹೋಗುತ್ತಿರಲಿಲ್ಲ.
ದಂತಗೋಪುರ, ಗಗನಕುಸುಮ, ಶಶವಿಷಾಣ ಮತ್ತು ಸ್ವಕಪೋಲಕಲ್ಪಿತಕಥೆಗಳಿಗೆ
ಅವರು ಉಪ್ಪು-ಸೊಪ್ಪು ಹಾಕುತ್ತಿರಲಿಲ್ಲ.
ಉಪರೋಕ್ತ ವಚನದ ವರಸೆಯನ್ನು ನೋಡಿದರೆ
ಅವರು ಗಾಳಿಯಲ್ಲಿ ಗೋಪುರ ಕಟ್ಟುವ ಜಾಯಮಾನದ ಜನಗಳನ್ನು
ನಂಬುವ ಮತ್ತು ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ಸ್ವಭಾವದವರಲ್ಲ
ಎಂಬ ಅಂಶವು ಸ್ಪಷ್ಟವಾಗುತ್ತದೆ.
“ಯಾವುದು ಎಲ್ಲಿರಬೇಕೋ ಅಲ್ಲಿದ್ದರೇನೇ ಚೆಂದ. ಯಾರು ಏನನ್ನು ಮಾಡಿಕೊಂಡಿರಬೇಕೋ ಅವರದನ್ನು ಮಾಡಿಕೊಂಡಿದ್ದರೇನೇ ಚೆಂದ”
ಎಂಬರ್ಥದಲ್ಲಿ ಪ್ರಸ್ತುತ ವಚನದಲ್ಲಿ ಅವರು ಮಾತನಾಡಿದ್ದಾರೆ.
“ಎಲ್ಲರೂ ಒಂದು. ಎಲ್ಲರಲ್ಲಿರುವ ಆತ್ಮ ಒಂದೇ. ಎಲ್ಲರೂ ಸಮಾನರು.
ಭೇದಭಾವ ಸಲ್ಲದು. ಎಲ್ಲರಲ್ಲಿರುವ ಚೈತನ್ಯ ಒಂದೇ...”
ಎಂಬಿತ್ಯಾದಿ ಮಾತುಗಳು ಸಭೆ, ಸಮಾರಂಭಗಳಿಗೆ ಮಾತ್ರ ಭೂಷಣಪ್ರಾಯವೆನಿಸಬಹುದು.
ಇಂಥ ಸಭಾಭೂಷಣ ಮಾತುಗಳು ವಾಸ್ತವಕ್ಕೆ ಹತ್ತಿರವಾಗಿ
ಮತ್ತು ವಾಸ್ತವದೊಂದಿಗೆ ತಾದಾತ್ಮ್ಯಗೊಂಡು ನಿಂತುಕೊಳ್ಳುವುದು ಕಷ್ಟಸಾಧ್ಯ.
ಇಂಥ ಮಾತುಗಳು ಕೇವಲ ‘ಭಾಷಣಪ್ರಿಯ’ ಮತ್ತು ‘ಭೂಷಣಪ್ರಿಯ’ ಸಂಸ್ಕೃತಿಗೆ ಮಾತ್ರ ಸೀಮಿತಗೊಂಡಿರುತ್ತವೆ. ಸಮಾಜದ ಮುಖ್ಯವಾಹಿನಿಯಲ್ಲಿ ಏಕರೂಪ ಸಂಹಿತೆಯಾಗಲಿ ಅಥವಾ ಅದ್ವೈತ ತತ್ತ್ವವಾಗಲಿ ಸಾರ್ವಭೌಮವಾಗಿ ನಿಂತುಕೊಳ್ಳುವುದು ‘ಅಸಾಧ್ಯ’
ಮತ್ತು ಅದು ‘ಅಹೋಕಷ್ಟಪ್ರದ’!
ಸಮಾಜದ ಮುಖ್ಯವಾಹಿನಿಯ ನಾಡಿಮಿಡಿತವನ್ನು ಚೆನ್ನಾಗಿ ತಿಳಿದುಕೊಂಡಿರುವ ಬೊಮ್ಮಣ್ಣನವರು ಪ್ರಸ್ತುತ ವಚನದಲ್ಲಿ ಸೂಕ್ತ ಹಾಗೂ ಸಮುಚಿತ ಉದಾಹರಣೆಗಳೊಂದಿಗೆ ಆ ವಿಷಯವನ್ನು ನಮಗೆಲ್ಲ ಅರ್ಥವಾಗುವ ಹಾಗೆ ಮಂಡಿಸಲು ಯತ್ನಿಸಿದ್ದಾರೆ.
ಬೊಮ್ಮಣ್ಣನವರು ಕೇಳುತ್ತಾರೆ,
“ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ?
ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ?” ಎಂದು.
“ಬಾಯಿಯಲ್ಲೂ ಆತ್ಮ ಇದೆ. ನಾಸಿಕ ಅಂದರೆ ಮೂಗಿನಲ್ಲೂ ಆತ್ಮ ಇದೆ”
ಎಂದು ಬಾಯಿ ಮುಚ್ಚಿಕೊಂಡು ಮೂಗಿನಿಂದ ಊಟಮಾಡುವುದಕ್ಕೆ ಆಗುತ್ತದೆಯೇ? ಸಾಧ್ಯವೇ ಇಲ್ಲ ತಾನೆ?
ಅದೇ ರೀತಿ ಉಸಿರಾಟಕ್ರಿಯೆಗೆಂದೇ ನಿಯೋಜಿತಗೊಂಡಿರುವ
ಮೂಗನ್ನು ಪಕ್ಕಕ್ಕಿಟ್ಟು ಬಾಯಲ್ಲೂ ಆತ್ಮ ಇದೆ ಎಂದು
ಬಾಯಿಯಿಂದ ಉಸಿರಾಡಿಕೊಂಡಿರುವುದಕ್ಕೆ ಆಗುತ್ತದೆಯೇ?
ವಾಸ್ತವದಲ್ಲಿ ಇದು ಸಾಧ್ಯವೇ?
ಬಾಯಿ ಮಾಡುವ ಕೆಲಸವನ್ನು ‘ಬಾಯಿ’ ಮಾಡಬೇಕು.
ಮೂಗು ಮಾಡುವ ಕೆಲಸವನ್ನು ‘ಮೂಗು’ ಮಾಡಬೇಕು.
ಷಡ್ರಸಗಳನ್ನು ರುಚಿಸುವ ಕಾರ್ಯಪ್ರಣಾಳಿಯದು ನಾಲಿಗೆ ಅಥವಾ ಬಾಯಿಗೆ ಸೇರಿದ್ದು.
ಅದಕ್ಕೋಸ್ಕರ ನಾಲಿಗೆ (ಬಾಯಿ) ರುಚಿಯನ್ನು
‘ಗ್ರಹಿಸುವ’ ಇಲ್ಲವೆ ‘ನಿಗ್ರಹಿಸುವ’ ಕೆಲಸವನ್ನು ಮಾತ್ರ ಮಾಡಬೇಕು.
ಇನ್ನು ಗಂಧ, ಸುಗಂಧ, ದುರ್ಗಂಧ ಇತ್ಯಾದಿಗಳ ವಾಸನೆಯನ್ನು ಗ್ರಹಿಸಿಬಿಟ್ಟು
ವಾಸನೆಯದು ಉಸಿರಾಟಕ್ಕೆ ಅರ್ಹವೋ, ಅನರ್ಹವೋ
ಎಂದು ತೀರ್ಮಾನಿಸುವುದು ಮೂಗಿನ ಕೆಲಸ.
ಆ ಕೆಲಸವನ್ನು ಅದುವೇ ಮಾಡಿಕೊಂಡಿರಬೇಕು.
ಜಿಹ್ಹೇಂದ್ರಿಯ ಮತ್ತು ಘ್ರಾಣೇಂದಿಯಗಳು ತಮ್ಮ ತಮ್ಮ ಕೆಲಸ, ಕಾರ್ಯಗಳನ್ನು
ಅದೇನೇ ಆದರೂ, ದಂದಣ-ದತ್ತಣವೆಂದರೂ ಸರಿ, ತಾವೇ ಮಾಡಿಕೊಂಡಿರಬೇಕು.
ಮತ್ತೆ ಮುಂದುವರಿದು ಬೊಮ್ಮಣ್ಣನವರು ಕೇಳುತ್ತಾರೆ,
“ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ?” ಎಂದು.
“ನೋಡುವುದು” ಕಣ್ಣಿನ ಕೆಲಸ. ಅದು ನೋಡಿಕೊಂಡಿರಬೇಕು, ಅಷ್ಟೇ.
ಇನ್ನು “ಕೇಳಿಸಿಕೊಳ್ಳುವುದು” ಕಿವಿಯ ಕೆಲಸ. ಅದು ಕೇಳಿಕೊಂಡಿರಬೇಕು, ಅಷ್ಟೇ!!
ಕಣ್ಣು-ಕಿವಿಗಳೆರಡೂ ಸೇರಿ ಮಾತನಾಡಿ ಒಂದು ಒಪ್ಪಂದಕ್ಕೆ ಬಂದು,
“ನಮ್ಮಿಬ್ಬರಲ್ಲಿರುವ ಆತ್ಮ ಒಂದೇ. ಅದಕ್ಕಾಗಿ ನಾವಿಬ್ಬರು ಪರಸ್ಪರ
ನಮ್ಮ ಕೆಲಸ-ಕಾರ್ಯಗಳನ್ನು “ಎಕ್ಸ್‌ಚೇಂಜ್” ಮಾಡಿಕೊಳ್ಳುವಾ”
ಎಂದರದು ಸಾಧ್ಯವೇ?
ಅಂಥ ಒಂದು “ಎಕ್ಸ್‌ಚೇಂಜ್ ಆಫರ್” ಜಾರಿಯಲ್ಲಿ ತರುವುದು ಸಾಧ್ಯವೇ?
ಅಸಾಧ್ಯ ತಾನೆ?
ಕಣ್ಣು ಕೇಳಿಸಿಕೊಳ್ಳಲರಿಯದು. ಕಿವಿ ನೋಡಲರಿಯದು.
ಆತ್ಮ ಒಂದೇ ಇದ್ದರೂ ಅವುಗಳಿಗೆ ನಿಗದಿತವಾದ ಕೆಲಸ-ಕಾರ್ಯಗಳನ್ನು
ಆಯಾ ಇಂದ್ರಿಯಗಳೇ ಮಾಡಿಕೊಂಡಿರಬೇಕು.
ಅವು ಸ್ವಸ್ಥಾನದಲ್ಲಿ ಅಂದರೆ ತಮ್ಮ ತಮ್ಮ ಸ್ಥಾನಗಳಲ್ಲಿ ಇದ್ದುಕೊಂಡು
ತಮ್ಮ ತಮ್ಮ ಕಾರ್ಯಗಳನ್ನು ಮಾಡಿಕೊಂಡಿದ್ದರೆ ಮಾತ್ರ ಚೆನ್ನ ಮತ್ತು ಚೆಲುವು.
ಇಲ್ಲವಾದರೆ ಎಲ್ಲವೂ ಯದ್ವಾತದ್ವಾ ಮತ್ತು ಎಡವಟ್ಟಾಗಿಬಿಡುತ್ತದೆ.
ಇನ್ನು ನಾವುಗಳು ಯಾವುದೇ ಕೆಲಸವನ್ನು ಒಮ್ಮೆ ನೆಚ್ಚಿಕೊಂಡು
ಅದನ್ನು ಮಾಡಲು ಒಪ್ಪಿಕೊಂಡಾದ ಮೇಲೆ
ಅಚಲವಾದ ನಿಷ್ಠೆ ಮತ್ತು ಅತೀವ ಶ್ರದ್ಧೆಯಿಂದ
ಆ ಕೆಲಸವನ್ನು ಮಾಡಿಕೊಂಡಿರಬೇಕು.
ಮಾಡುವ ಕೆಲಸದಲ್ಲಿ ನಿಷ್ಠೆ, ನಿಯತ್ತು, ಪ್ರೀತಿ, ವಿಶ್ವಾಸ ಬೇಕು.
“ಮನಸ್ಸೊಪ್ಪಿದ” ಮತ್ತು “ಮಾಡಲೊಪ್ಪಿಕೊಂಡ” ಕೆಲಸದಲ್ಲಿ ನಿಷ್ಠೆ ಇದ್ದರೆ ಮಾತ್ರ
ಅದು ‘ಭಕ್ತಿ’ ಎನಿಸುತ್ತದೆ. ಮತ್ತು ಅಂಥ ಒಂದು ಭಕ್ತಿಯೇ
ದೇವತಾಶಕ್ತಿಯನ್ನು ಅರಿಯುವುದಕ್ಕೆ ಭಿತ್ತಿಯಾಗಿ (ಭಿತ್ತಿ = ಗೋಡೆ) ನಿಂತುಕೊಳ್ಳುತ್ತದೆ.
ಇಲ್ಲಿ ಸಾಂದರ್ಭಿಕವಾಗಿ ‘ಭಿತ್ತಿ’ ಎಂಬ ಪದಕ್ಕೆ
’ಮೂಲಪಾಠ’ ಮತ್ತು ‘ಮೂಲಪಠ್ಯ’ ಎಂದು ಕೂಡ ಅರ್ಥಮಾಡಿಕೊಳ್ಳಬಹುದು.
ಭಕ್ತಿಯೇ ನಮಗೆಲ್ಲ ದೈವದ ಅರಿವು ಮಾಡಿಕೊಡುವ
ಮೂಲದ್ರವ್ಯ ಮತ್ತು ಭಕ್ತಿಮಾರ್ಗವೇ ನಮ್ಮಗಳಿಗೆ
ಅರಿವಿನ ದಾರಿತೋರುವ ಮೊದಲ ದಾರಿದೀಪ.
ವೃಥಾ ಅದು ಹಾಗೆ, ಇದು ಹೀಗೆ. ದೇವರು ಎಲ್ಲೆಲ್ಲೂ ಇದ್ದಾನೆ,
ಹಾಗೆ, ಹೀಗೆ ಎಂದು ವೇದಾಂತಿಯ ಹಾಗೆ ಮಾತನ್ನಾಡುತ್ತ ಕುಳಿತುಕೊಳ್ಳಬೇಡಿ.
ಈ ಶುಷ್ಕವೇದಾಂತ ಮತ್ತು ವೇದಾಂತದ ಆಲಾಪ-ಪ್ರಲಾಪಗಳಿಂದ
ಏನನ್ನೂ ಸಾಧಿಸಲು ಆಗುವುದಿಲ್ಲ.
ಆದ್ದರಿಂದ ಭಕ್ತಿಮಾರ್ಗದಲ್ಲಿ ನಡೆದು
ಈಪ್ಸಿತ ಮತ್ತು ಇಷ್ಟಾರ್ಥವನ್ನು ಪಡೆದುಕೊಳ್ಳುವುದು ಉತ್ತಮ”
ಎಂದು ಬೊಮ್ಮಣ್ಣನವರು ಪ್ರಸ್ತುತ ವಚನದಲ್ಲಿ
ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
“ದೇವರು ಎಲ್ಲ ಕಡೆಗಳಲ್ಲೂ ಇದ್ದಾನೆ” ಎಂಬ ಮಾತನ್ನು ನಾವು ಒಪ್ಪಬೇಕು.
ಹಾಗೆಂದಮಾತ್ರಕ್ಕೆ ಮಂತ್ರಾಲಯಕ್ಕೂ ಮತ್ತು ಮದಿರಾಲಯಕ್ಕೂ
ಏನೂ ವ್ಯತ್ಯಾಸವಿಲ್ಲವೆಂದು ‘ವಾಗ್ವಾದ’ ಮಾಡುವುದಾಗಲಿ
ಅಥವಾ ‘ವಾಗ್ಯುದ್ಧ’ ಮಾಡುವುದಾಗಲಿ ಸರಿಯಲ್ಲ.
ಏನಿದ್ದರೂ ದೇವಾಲಯ ದೇವಾಲಯವೇ!
ಮಂತ್ರಾಲಯ ಮಂತ್ರಾಲಯವೇ!!
ಮದಿರಾಲಯ ಮದಿರಾಲಯವೇ!!!
ಮಂತ್ರಾಲಯದ ಹಾಗೆ ಮದಿರಾಲಯದಲ್ಲೂ ದೇವರಿರಬಹುದು.
ಆದರೆ ದೇವಾಲಯದ ಪರಿಸರಕ್ಕೂ ಮತ್ತು ಮದಿರಾಲಯದ ಪರಿಸರಕ್ಕೂ ಅ
ಜಗಜಾಂತರವಿರುವ ವಿಷಯವನ್ನು ಗಮನಬಾಹಿರವಾಗಿಸುವುದು ಸರಿಯಲ್ಲ.
ದೇವಾಲಯ ಮತ್ತು ಮದಿರಾಲಯಗಳ
ಪಾತ್ರತೆ ಮತ್ತು ಪರಿಸರದಲ್ಲಿ ಭಿನ್ನತೆ ಇರುವುದರಿಂದ
ಆ ಪಾತ್ರತೆ ಮತ್ತು ಪರಿಸರಕ್ಕೆ ಅನುಗುಣವಾಗಿ ನಾವುಗಳು ವರ್ತಿಸಿಕೊಂಡಿರಬೇಕು
ಎಂಬುವುದು ಪ್ರಸ್ತುತ ವಚನದ ತಾತ್ಪರ್ಯ.
ಎಲ್ಲ ಕಡೆಗಳಲ್ಲೂ ಮತ್ತು ಎಲ್ಲ ಸಂದರ್ಭಗಳಲ್ಲೂ
ವೇದಾಂತದ ಮಾತನ್ನಾಡಿಕೊಂಡು ಮೂಗು ತೂರಿಸಿಕೊಂಡಿರುವುದು ಸರಿಯಲ್ಲ
ಎಂದು ಬೊಮ್ಮಣ್ಣನವರು ವೇದಾಂತಿಗಳಿಗೆ ಪ್ರಸ್ತುತ ವಚನದಲ್ಲಿ
ಎಚ್ಚರಿಕೆಯ ಗುಟುರುಹಾಕುತ್ತ ಒಂದು ಸೂಕ್ಷ್ಮವಾದ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
No comments:
Post a Comment