Good Evening
7th December 2015
@ Hiremath, Tumkur
ತುಮಕೂರು ಡಿ. ೦೭ : “ಲಿಂಗದೀಕ್ಷೆ ಇದು ಬರೀ ಲಿಂಗದೀಕ್ಷೆ ಮಾತ್ರವಲ್ಲ,
ಲಿಂಗದೀಕ್ಷೆ ಇದು, ತ್ರಿವಿಧ ದೀಕ್ಷೆಗಳ ತ್ರಿವೇಣಿಸಂಗಮ!! ಕ್ರಿಯಾದೀಕ್ಷೆ, ಮಂತ್ರದೀಕ್ಷೆ
ಮತ್ತು ಲಿಂಗದೀಕ್ಷೆ..., ಈ ತ್ರಿವಿಧ ದೀಕ್ಷೆಗಳ ತ್ರಿಪುಟಿಯೇ ಲಿಂಗದೀಕ್ಷೆ.
ಲಿಂಗದೀಕ್ಷೆ ಇದು, ದೇಹವನ್ನು ದೇವಾಲಯವಾಗಿಸುವ ಒಂದು ಪ್ರಕ್ರಿಯೆ.
ಲಿಂಗದೀಕ್ಷೆಯನ್ನು ಪಡೆದುಕೊಂಡು ಸದಾಕಾಲದಲ್ಲೂ ಎದೆಯ ಮೇಲೆ
ಲಿಂಗವನ್ನು ಧರಿಸಿಕೊಂಡಿರುವವನು ನಡೆದಾಡುವ ದೇವಾಲಯವಾಗುತ್ತಾನೆ.
ಆತ ಸ್ಥಾವರ ದೇವಾಲಯಗಳಿಗೆ ಸವಾಲ್ ಆಗಿ ನಿಲ್ಲುವ ಮೂಲಕ
“ಜಂಗಮ ದೇವಾಲಯ” ಎಂಬ
ಚಾರುಕೀರ್ತಿಗೆ ಪಾತ್ರನಾಗುತ್ತಾನೆ.
ಹೆಂಡತಿಯನ್ನು ‘ಅರ್ಧಾಂಗಿ’ ಎಂದು ಕರೆಯುವ ಹಾಗೆ
ಲಿಂಗವನ್ನು ಧರಿಸಿದವರಿಗೆ ‘ಲಿಂಗಾಂಗಿ’ ಎಂದು ಕರೆಯುತ್ತಾರೆ. ರಕ್ತ, ಮಾಂಸ, ಮೂಳೆಗಳಿಂದ ಕೂಡಿದ
ಅಂಗವನ್ನು ಲಿಂಗಾಂಗವಾಗಿಸುವುದೇ ಲಿಂಗದೀಕ್ಷೆ. ಲಿಂಗವಿದು ಶಿವನ ಕುರುಹು.
“ಕರಿಯು ಕನ್ನಡಿಯೊಳಗೆ ಅಡಗಿದ ಹಾಗೆ” ಜಗದಗಲ, ಮುಗಿಲಗಲ,
ಮಿಗೆಯಗಲನಾದ ಶಿವನು ಲಿಂಗದೊಳಡಗಿದ್ದಾನೆ.
ಬಸವಣ್ಣನವರು
“ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಲ್ಲಾ”
ಎಂದು ಹೇಳಿದುದನ್ನು ನಾವೆಲ್ಲ ಈ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಬಹುದು.
ಆ ನಮ್ಮ ದೇವರು “ಅಣೋರಣೀಯಾನ್” ಕೂಡ ಅಹುದು ಮತ್ತು
ಆತ “ಮಹತೋ ಮಹೀಯಾನ್” ಕೂಡ ಅಹುದು.
ತನ್ನ ಭಕ್ತರಿಗಾಗಿ ದೇವರು ತನ್ನನ್ನೇ ತಾನು ಮಾರ್ಪಾಟಿಗೆ
ವಸ್ತುವಾಗಿಸಿಕೊಳ್ಳುತ್ತಾನೆ.
ಆತ ಭಕ್ತರಿಗಾಗಿ ಇರುವೆಯೂ ಆಗುತ್ತಾನೆ, ಐರಾವತವೂ ಆಗುತ್ತಾನೆ”
ಎಂದು ತುಮಕೂರು ಹಿರೇಮಠಾಧ್ಯಕ್ಷರಾದ
ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು
ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಹಿರೇಮಠದಲ್ಲಿ
ವಟುಗಳಿಗೆ ಲಿಂಗದೀಕ್ಷೆಯನ್ನು ನೀಡಿ
ತಮ್ಮ ‘ಆಶೀರ್ವಚನ’ ಸಂದೇಶದಲ್ಲಿ ಈ ಮಾತುಗಳನ್ನು ಹೇಳಿದರು.
ಶ್ರೀ ಶ್ರೀಗಳು ಮತ್ತೆ ಮುಂದುವರಿದು, “ಲಿಂಗದೀಕ್ಷೆಯನ್ನು ಪಡೆದ ದೀಕ್ಷಿತ ವಟುಗಳು
ಬದುಕಿನಲ್ಲಿ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು.
‘ದೀಕ್ಷೆ’ ಎಂಬ ಪದಕ್ಕೆ ‘ಬದ್ಧತೆ’ ಎಂಬ ಇನ್ನೊಂದು ಅರ್ಥ ಕೂಡ ಇದೆ.
ಬದುಕನ್ನು ಬದ್ಧತೆಗೆ ಒಳಪಡಿಸುವುದೇ ‘ದೀಕ್ಷೆ’. ‘ದೀಕ್ಷಾಬದ್ಧರು’ ಎಂದರೆ ‘ಪ್ರತಿಜ್ಞಾಬದ್ಧರು’ ಎಂದರ್ಥ.
“ದೀಕ್ಷಿತರಾಗುವುದು” ಮತ್ತು “ದೀಕ್ಷಾಬದ್ಧರಾಗುವುದು” ಎಂದರೆ ಸ್ವಸ್ಥ, ಸುಸಂಸ್ಕೃತ,
ಸುಶೀಲ ಮತ್ತು ನಾಗರಿಕ ಬದುಕಿಗೆ ನಿಮ್ಮನ್ನು ನೀವು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದು ಎಂದರ್ಥ.
ಲಿಂಗಪೂಜೆಯ ಜೊತೆ ಜೊತೆಯಲ್ಲಿ ಸಮಾಜಸೇವೆ ಕೂಡ ನಿಮ್ಮ ಪೂಜೆಯಾಗಬೇಕು.
ನೀವು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಿ. ಅಭ್ಯಂತರವಿಲ್ಲ.
ಅದಕ್ಕೆ ನಮ್ಮ ಸಂಪೂರ್ಣ ಆಶೀರ್ವಾದ ಇದೆ.
ಆದರೆ ನೀವು “ಹೌದಪ್ಪನ ಜೊತೆ ಹೌದಪ್ಪ” ಮತ್ತು “ಅಲ್ಲಪ್ಪನ ಜೊತೆ ಅಲ್ಲಪ್ಪ” ಆಗಬೇಡಿ.
ಸಮಾಜದ ಮಧ್ಯದಲ್ಲಿ ಹಾಗೂ ಸಮಾಜದ ಜನಗಳ ಮಧ್ಯದಲ್ಲಿ
ನೀವು ನಿಮ್ಮದೇ ಆದ ಸ್ವತಂತ್ರ ‘ಛಾಪು’ ಮೂಡಿಸಬೇಕು. ನೀವು “ದಶಾನಾಂ ಏಕಾದಶ” ಅಲ್ಲ;
ನೀವು ಎಲ್ಲರಿಗಿಂತಲೂ ಭಿನ್ನ ಮತ್ತು ವಿಭಿನ್ನ ಎಂದು ಜನಗಳು ನಿಮ್ಮನ್ನು ಕಂಡು ಮಾತನಾಡುವಂತಾಗಬೇಕು.
ನೀವು ಬರೀ “ಅಂಗಿ” ಅಲ್ಲ;
ನೀವು “ಲಿಂಗಾಂಗಿ” ಎಂಬುವುದನ್ನು ಮರೆಯಕೂಡದು.
ಅಷ್ಟು ಮಾತ್ರವಲ್ಲ, ನೀವು “ಲಿಂಗಾಂಗಿ” ಎಂಬುವುದನ್ನು ಸಾಬೀತುಪಡಿಸಬೇಕು” ಎಂದು ದೀಕ್ಷಿತ ವಟುಗಳಿಗೆ ಕಿವಿಮಾತುಗಳನ್ನು ಹೇಳಿದರು.
ದೀಕ್ಷಾ ಸಮಾರಂಭದ ವೈದಿಕ ನೇತೃತ್ವವನ್ನು ವಿದ್ವಾನ್ ಆರ್. ಎಸ್. ಗೌರೀಶಂಕರ ಶಾಸ್ತ್ರಿಗಳು,
ಹೆಬ್ಬೂರಿನ ರೇಣುಕಾರಾಧ್ಯ ಶಾಸ್ತ್ರಿಗಳು, ತೋವಿನಕೆರೆಯ ಬಸವರಾಜ್ ಶಾಸ್ತ್ರಿಗಳು ಹಾಗೂ ಶಿವಾನಂದಯ್ಯ ಶಾಸ್ತ್ರಿಗಳು ವಹಿಸಿಕೊಂಡಿದ್ದರು. ದೀಕ್ಷಾ ಸಮಾರಂಭದಲ್ಲಿ ಶ್ರೀ ಸಿ. ವಿ. ಮಹದೇವಯ್ಯನವರು, ವೈ. ಎಮ್. ರೆಡ್ಡಿಯವರು,
ವಿ. ರಾಜಶೇಖರಯ್ಯನವರು, ಗವಿಸಿದ್ಧಯ್ಯನವರು, ಜಿ. ಎಸ್. ಎಸ್. ಮೂರ್ತಿಯವರು, ಭಾಲಚಂದ್ರರವರು,
ಬಾಬು ರಾಜೇಂದ್ರ ಪ್ರಸಾದ್‌ರವರು, ತೀತ ಮಲ್ಲಿಕಾರ್ಜುನಯ್ಯನವರು,
ಕೆ. ಆರ್. ಜಗನ್ನಾಥ್‌ರವರು, ಶ್ರೀ ಪ್ರಕಾಶ್‌ರವರು,
ಶ್ರೀ ನಟರಾಜ್‌ರವರು, ಚಂದ್ರಶೇಖರ್‌ರವರು, ಶ್ರೀ ಟಿ. ಹೆಚ್. ಪ್ರಸನ್ನಕುಮಾರ್....,
ಇವರೇ ಮೊದಲಾದ ಗಣ್ಯಮಾನ್ಯರು ಮತ್ತು ರುದ್ರಾಣಿ ಬಳಗದ ಮಾತೆಯರು ಉಪಸ್ಥಿತರಿದ್ದರು.
ಸರಿಸುಮಾರು ೫೦ಕ್ಕೂ ಹೆಚ್ಚು ಜನ ಯುವಕ-ಯುವತಿಯರು ಮತ್ತು ಮಕ್ಕಳಿಗೆ
ಶ್ರೀಮಠದಲ್ಲಿ ಲಿಂಗದೀಕ್ಷೆಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀಮಠದ ಎದುರಿನಲ್ಲಿ ಪ್ರಫುಲ್ಲವಾಗಿ ಬೆಳೆದ
ಬಿಲ್ವವೃಕ್ಷಕ್ಕೆ ಕೂಡ ಲಿಂಗದೀಕ್ಷೆಯನ್ನು ಮಾಡಲಾಯಿತು.
ಸಮಾರಂಭದ ನಂತರ ದೀಕ್ಷಾರ್ಥಿ ವಟುಗಳಿಗೆ ಹಾಗೂ ಆಗಮಿಸಿದ ಎಲ್ಲ ಭಕ್ತಾದಿಗಳಿಗೂ
ಶ್ರೀಮಠದಿಂದ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಮಾಚಾರ ವರದಿ: ಮಧುಸೂದನ & ಪಂಚಾಕ್ಷರಿ
ಹಿರೇಮಠ, ತುಮಕೂರು
7th December 2015
@ Hiremath, Tumkur
ಅಂಗವನ್ನು ಲಿಂಗಾಂಗವಾಗಿಸುವುದೇ ಲಿಂಗದೀಕ್ಷೆ
ಡಾ. ಶಿವಾನಂದ ಶಿವಾಚಾರ್ಯರು

No comments:
Post a Comment